'ಮಂಜು ಹೇಳಿಕೆ ಹಾಸ್ಯಾಸ್ಪದ'
ಮಾಗಡಿ: ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 600 ಕೋಟಿ ರು. ಹಗರಣದ ಫೈಕಿ 175 ಕೋಟಿ ರು ಹಣವನ್ನು ಸರ್ಕಾರಕ್ಕೆ ಗುತ್ತಿಗೆದಾರರಿಂದ ವಾಪಸು ಕಟ್ಟಿಸಿರುವುದಾಗಿ, ಇನ್ನುಳಿದ 25 ಕೋಟಿ ರು. ಗಳನ್ನು ಕಟ್ಟಿಸುವವರೆವಿಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಅವರ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮುದ್ದುರಾಜ ಯಾದವ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೋರಾಟ ಫಲದಿಂದಾಗಿ 175 ಕೋಟಿ ರು. ಹಣವನ್ನು ಗುತ್ತಿಗೆದಾರರಿಂದ ಸರ್ಕಾರಕ್ಕೆ ವಾಪಸು ಕಟ್ಟಿಸಿದ್ದರೆ ದಾಖಲೆ ಸಮೇತ ಮಾಧ್ಯಮಗಳಿಗೆ ಮಾಹಿತಿ ನೀಡಲಿ, ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿರುವುದು ಜನಸಾಮಾನ್ಯರಿಗೆ ತಪ್ಪು ಸಂದೇಶ ರವಾನಿಸಿದಂತಾಗುದಿಲ್ಲವೆ ಎಂದಿದ್ದಾರೆ.