ಮದ್ಯದಂಗಡಿ ಸ್ಥಳಾಂತರಕ್ಕೆ ಒತ್ತಾಯ
ಸೂಲಿಬೆಲೆ: ಪಟ್ಟಣದ ದಲಿತರು ವಾಸಿಸುವ ಕಾಲೋನಿ ಹಾಗೂ ಶಾಲೆ ಪರಿಸರಕ್ಕೆ ಹೊಂದಿಕೊಂಡಿರುವಂತ ಮದ್ಯದಂಗಡಿಗಳನ್ನು ಗ್ರಾಮದಿಂದ ಹೊರಗೆ ಸ್ಥಳಾಂತರಿಸುವಂತೆ ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿದ್ದ ಹೋಬಳಿಯ ನಾನಾ ಗ್ರಾಮದ ದಲಿತ ಮುಖಂಡರು, ಸೂಲಿಬೆಲೆಯಲ್ಲಿನ ದಲಿತರ ಕಾಲೊನಿಗೆ ಹೊಂದಿಕೊಂಡಂತೆ ಇರುವ ಮದ್ಯದಂಗಡಿಗಳಿಂದ ನೆಮ್ಮದಿ ಇಲ್ಲದಂತಾಗಿದೆ. ಕೂಲಿ ಮಾಡಿ ಬಂದ ಹಣದಿಂದ ಹತ್ತಿರದಲ್ಲಿಯೇ ಇರುವ ಮದ್ಯದಂಗಡಿಗಳಿಗೆ ಹೋಗಿ ಕುಡಿದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ದಲಿತರ ಸಮಸ್ಯೆಗಳಿಗೆ ತಕ್ಷಣ ಸ್ವಂದಿಸಿ ಎಂದು ಒತ್ತಾಯಿಸಿದರು. ದಲಿತರ ದೂರುಗಳ ಬಗ್ಗೆ ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಪರಾಧ ವಿಭಾಗ ಪಿಎಸ್ಐ ನವೀನ್ಕುಮಾರ್ ಭರವಸೆ ನೀಡಿದರು. ನಾನಾ ಮುಖಂಡರು, ಪೊಲೀಸ್ ಸಿಬ್ಬಂದಿ ಹಾಜರಿದ್ದರು.