ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾತೃ ಭಾಷೆಗೆ ಹೆಚ್ಚಿನ ಒತ್ತು ನೀಡಬೇಕು

Rashmi Kasaragodu
Updated On : 3 Dec 2013, 12:30 pm

ವಿಜಯಪುರ: ಪರಭಾಷೆಯ ಮೇಲಿರುವ ವ್ಯಾಮೋಹವನ್ನು ತಗ್ಗಿಸಿಕೊಂಡು ಮಾತೃಭಾಷೆಯನ್ನು ಹೆಚ್ಚಿನ ರೀತಿಯಲ್ಲಿ ಬಳಸುವಂತಾಗಬೇಕು ಎಂದು ಪ್ರಾಧ್ಯಾಪಕ ಶ್ರೀಕಂಠಮೂರ್ತಿ ತಿಳಿಸಿದರು.  ತಾಲೂಕು ಕಸಾಪ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯೋತ್ಸವ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಗತಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎನ್.ರಮೇಶ್ ರಾಷ್ಟ್ರಕವಿ ಕುವೆಂಪು ಅವರ ಕುರಿತು ಉಪನ್ಯಾಸ ನೀಡಿದರು. ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಎನ್. ರಾಜ್ ಗೋಪಾಲ್, ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ  ಚಿ.ಮಾ. ಸುಧಾಕರ್, ಜೆಡಿಎಸ್ ಟೌನ್ ಅಧ್ಯಕ್ಷ ಎನ್.ನಾರಾಯಣಸ್ವಾಮಿ, ಬಸವರಾಜು, ಕೆ. ವೀರಭದ್ರಯ್ಯ, ಹೋಬಳಿಯ ಕಸಾಪ ಅಧ್ಯಕ್ಷ ಕೆ.ವಿ.ಭೈರೇಗೌಡ, ಬಿಜೆಪಿ ಮುಖಂಡ ಇಕ್ಬಾಲ್ ಅಹಮದ್ ಉಪಸ್ಥಿತರಿದ್ದರು.
ಅಕ್ರಮ ಸಂಬಂಧ: ಹಲ್ಲೆಯಿಂದ ವ್ಯಕ್ತಿ ಸಾವು
ಮಾಗಡಿ: ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಧರ್ಮನಾಯಕ ಹಾಗೂ ಇತರರು ಕೃಷ್ಣನಾಯಕ ಎಂಬುವರ ಮೇಲೆ ಹಲ್ಲೆ ನಡೆಸಿದ್ದರಿಂದ ಕೃಷ್ಣನಾಯಕ (60) ಮೃತಪಟ್ಟಿರುವ ಘಟನೆ ತಾಲೂಕಿನ ವೆಂಗಳಪ್ಪನಹಳ್ಳಿಯಲ್ಲಿ ನಡೆದಿದೆ. ಮಾಗಡಿ ತಾಲೂಕಿನ ವೆಂಗಳಪ್ಪನಹಳ್ಳಿ ತಾಂಡ್ಯದ ಧರ್ಮನಾಯಕ ಎಂಬುವರ ಪತ್ನಿ ಲಕ್ಷ್ಮೀಬಾಯಿಯೊಂದಿಗೆ ಕೃಷ್ಣನಾಯಕ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಇದರಿಂದ ಕುಪಿತನಾದ ಧರ್ಮನಾಯಕ ಇತರರು,  ಕೃಷ್ಣನಾಯಕನ ಮೇಲೆ ಹಲ್ಲೆ ನಡೆಸಿದ್ದರಿಂದ ಕೃಷ್ಣನಾಯಕ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಧರ್ಮನಾಯಕ, ಲಕ್ಷ್ಮೀಬಾಯಿ, ಮಗ ಜಯಂತನಾಯಕ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಎಸ್ಪಿ ಅನುಪಮ ಅಗರವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದುಕೊರತೆ ಅಹವಾಲು ಇಂದು
ಹೊಸಕೋಟೆ: ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಸರಕಾರದ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದಕೊರತೆಗಳ ಬಗ್ಗೆ ಉಪ ಲೋಕಾಯುಕ್ತ  ನ್ಯಾ. ಸುಭಾಷ್ ಬಿ. ಅಡಿ ಅವರು ಡಿ.3ರಂದು ಬೆಂಗಳೂರನ ಕೆ.ಜಿ.ರಸ್ತೆಯಲ್ಲಿರುವ ಗ್ರಾಮಾಂತರ ಜಿಪಂ ಸಭಾಂಗಣದಲ್ಲಿ ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಎಂದು ತಹಸೀಲ್ದಾರ್ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement