ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಂಬೇಡ್ಕರ್, ಭಗವಾನ್ ಬುದ್ಧ ಚಿತ್ರವಿದ್ದ ನಾಮಫಲಕ ನಾಶ: ಠಾಣೆ ಮುಂದೆ ಪ್ರತಿಭಟನೆ

Rashmi Kasaragodu
Updated On : 5 Dec 2013, 1:40 am

ದೇವನಹಳ್ಳಿ: ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿ ರಾಜ್ಯ ಪ್ರಜಾ ವಿಮೋಚನಾ ಚಳುವಳಿ ಸಂಘಟನೆಯ ಶಾಖೆ ಉದ್ಘಾಟನಾ ನಾಮಫಲಕವನ್ನು ನಾಶಪಡಿಸಿರುವ ಹಿನ್ನಲೆಯಲ್ಲಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಪಿವಿಸಿ ಕಾರ್ಯಕರ್ತರು ರಾಜ್ಯ ಸಂಘದ ಕಾರ್ಯದರ್ಶಿ ಮುನಿ ಆಂಜಿನಪ್ಪ ನೇತೃತ್ವದಲ್ಲಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಪ್ರಜಾ ವಿಮೋಚನಾ ಚಳವಳಿಯ ಶಾಖೆಯನ್ನು ಸಾದಹಳ್ಳಿ ಗ್ರಾಮದಲ್ಲಿ ಪಕ್ಷದ ಸಂಘಟನೆಗಾಗಿ ನ.20 ರಂದು ಡಾ.ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಭಾವಿಚಿತ್ರವಿದ್ದ ಸಂಘದ ನಾಮಫಲಕವನ್ನು ಹಾಕಿದ್ದರು. ಆದರೆ ಯಾರೋ ಕಿಡಿಗೇಡಿಗಳು ಡಿ.2 ರಂದು ರಾತ್ರಿ ನಾಮಫಲಕವನ್ನು ಕಿತ್ತು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಿದರಲ್ಲದೆ  ಡಾ.ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರಿಗೆ ಅವಮಾನ ಮಾಡಲಾಗಿದೆ ಎಂದು ರಾಜ್ಯ ಪಿವಿಸಿ ಕಾರ್ಯದರ್ಶಿ ಮುನಿ ಆಂಜಿನಪ್ಪ ತಿಳಿಸಿ ಈ ಪ್ರಕರಣದಲ್ಲಿ ಮಾಜಿ ಶಾಸಕರೊಬ್ಬರ ಕೈವಾಡವಿರುವುದಾಗಿ ಆರೋಪಿಸಿದರು. ತಪ್ಪಿತಸ್ಥರು ಯಾರೇ ಆಗಿರಲಿ ಅಂತಹವರ ವಿರುದ್ಧ ತನಿಖೆ ಕೈಗೊಂಡು ಕಾನೂನಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಪ್ರತಿಭಟನಾ ಸಂಧರ್ಭದಲ್ಲಿ ತಾಲೂಕು ಪಿವಿಸಿ ಅಧ್ಯಕ್ಷ ಸಿಂಗರಹಳ್ಳಿ ನರಸಿಂಹಯ್ಯ, ಜಿಲ್ಲಾ ಉಪಾಧ್ಯಕ್ಷ ದೇವನಹಳ್ಳಿ ಮುರಳಿ, ತಾ.ಮಹಿಳಾ ಸಂಘದ ಅಧ್ಯಕ್ಷೆ ರತ್ನಮ್ಮ ಭಾಗವಹಿಸಿದ್ದರು.
ಅಂ.ರಾ.ವಿಮಾನ ನಿಲ್ದಾಣ ಪೊಲೀಸ್ ಇನ್ಸ್‌ಪೆಕ್ಟರ್ ಪಾಂಡುರಂಗ ಪ್ರತಿಭಟನಾಕಾರರಲ್ಲಿ ಮಾತನಾಡಿ  ನಮಗೆ ತನಿಖೆ ಮಾಡಲು ಅವಕಾಶಕೊಡಿ,  ಇನ್ನೆರೆಡು ದಿನದಲ್ಲಿ ಸಾದಹಳ್ಳಿ ಗ್ರಾಮದಲ್ಲಿ ಮುಖಂಡರನ್ನು ಸೇರಿಸಿ  ಶಾಂತಿ ಸಭೆ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement