ಅದ್ಧೂರಿ ಕನ್ನಡ ರಾಜ್ಯೋತ್ಸವ, ದೀಪೋತ್ಸವಕ್ಕೆ ಚಾಲನೆ
ಮಾಗಡಿ: ಸಮುದಾಯದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಶ್ರದ್ಧಾಪೂರ್ವಕ ಧಾರ್ಮಿಕ ಕಾರ್ಯಗಳು ಸಹಕಾರಿಯಾಗಿವೆ ಎಂದು ವಕೀಲ ಡಿ.ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.
ಅವರು ಸೋಮವಾರ ರಾತ್ರಿ ಗಾಂಧಿನಗರದಲ್ಲಿ ಬುದ್ಧ, ಬಸವಣ್ಣ ಸ್ವಾಮಿ ವಿವೇಕಾನಂದ ಯುವ ವೇದಿಕೆ ಏರ್ಪಡಿಸಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಗಣಪತಿ ದೇವಾಲಯದಲ್ಲಿ ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ ಏರ್ಪಡಿಸಿದ್ದ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುರಸಭಾ ಮಾಜಿ ಅಧ್ಯಕ್ಷ ಎಚ್.ಜಿ. ಪುರುಷೋತ್ತಮ್, ಮಾಜಿ ಸದಸ್ಯೆ ರತ್ನಮ್ಮ ರಂಗೇಗೌಡ, ಬುದ್ಧ, ಬಸವಣ್ಣ, ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರವೀಶ್, ಪದಾಧಾಕಾರಿಗಳಾದ ಜಯಕುಮಾರ್, ರಮೇಶ್, ಮೋಹನ್, ಎಂ.ಎಸ್. ಸಿದ್ದಲಿಂಗೇಶ್ವರ್, ರಾಜಣ್ಣ, ಕುಮಾರ್ ರಾಘವೇಂದ್ರ ಟ್ರೇಡರ್ಸ್ನ ಪುರಷೋತ್ತಮ್, ಮೋಹನ್ ಕುಮಾರ್, ಜಯಣ್ಣ, ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದೇಶ್, ಆರ್.ಬಿ. ಅರಸನಾಳ್, ಹನುಮಂತಪ್ಪ, ಗಣೇಶ್, ವಿವೇಕಾನಂದ ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.