ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ನ್ಯಾಯಾಂಗ ಇಲಾಖೆಯಲ್ಲಿ ಕನ್ನಡ ಭಾಷೆ ಬಳಸುವಂತಾಗಲಿ'

Rashmi Kasaragodu
Updated On : 5 Dec 2013, 1:41 am

ರಾಮನಗರ: ಬಸವನಪುರದ ಬಳಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ, ಮಹರ್ಷಿ ವಾಲ್ಮೀಕಿ ಹಾಗೂ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ.ಶಿವನಂಜಯ್ಯ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಹಲವಾರು ರಾಜಮನೆತನಗಳು ಶ್ರಮಿಸಿವೆ. ಶ್ರೇಷ್ಠ ಕವಿಗಳಾದ ಪಂಪ, ರನ್ನ, ಪೊನ್ನ ಸೇರಿದಂತೆ  ವಚನಕಾರರು, ಕೀರ್ತನಕಾರರು ಕನ್ನಡ ಭಾಷೆಯನ್ನು ಸಮೃದ್ಧವಾಗಿಸಿದ್ದಾರೆ. ಸುಮಾರು ಎರಡೂವರೆ ಸಾವಿರ ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಕಡೆಗಣಿಸಿ ಕಡಿಮೆ ಇತಿಹಾಸವಿರುವ ಇಂಗ್ಲಿಷ್ ಭಾಷೆಗೆ ಮನ್ನಣೆ ನೀಡಲಾಗುತ್ತಿದೆ ಎಂದು ವಿಷಾದಿಸದರು.
ನ್ಯಾಯಾಂಗ ಇಲಾಖೆಯಲ್ಲಿ ಇಂಗ್ಲಿಷ್ ಭಾಷೆಯ ಜೊತೆಗೆ ಕನ್ನಡ ಭಾಷೆಯನ್ನು ಬಳಸುವಂತಾಗಬೇಕು. ಕನ್ನಡದಲ್ಲೇ ವಾದ ಮಾಡಬೇಕು ಹಾಗೂ ತೀರ್ಪುಗಳೂ ಕೂಡ ಕನ್ನಡ ಭಾಷೆಯಲ್ಲೇ ಬರುವಂತಾಗಬೇಕು. ಹೀಗಾದಲ್ಲಿ ಕಕ್ಷಿದಾರರಿಗೆ ಅನುಕೂಲವಾಗುವ ಜತೆಗೆ ಕನ್ನಡವನ್ನು ಉಳಿಸಿದಂತಾಗುತ್ತದೆ ಎಂದರು. ಉಪನ್ಯಾಸಕ ಜಿ.ಶಿವಣ್ಣ ಮಾತನಾಡಿ, ಬೇಡ ಜನಾಂಗದಲ್ಲಿ ಹುಟ್ಟಿ, ಕೊಲೆ, ಸುಲಿಗೆ, ದರೋಡೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ರತ್ನಾಕರನು ಸತತ ಅಭ್ಯಾಸದಿಂದ ಘನ ಪಾಂಡಿತ್ಯ ಪಡೆದು ಪ್ರಪಂಚದಲ್ಲೇ ಶ್ರೇಷ್ಠವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ್ದಾರೆ. ಸರ್ವ ಕಾಲಕ್ಕೂ ಅನ್ವಯಿಸುವ ಜೀವನದ ಪಾಠಗಳು ಈ ಕಾವ್ಯವದಲ್ಲಿ ಅಡಗಿವೆ ಎಂದರು.  ಉಪನ್ಯಾಸಕ ಸುರೇಶ್ ರಾಮಚಂದ್ರ ನಾಯಕ್ ಮಾತನಾಡಿ, ಕನಕದಾಸರು ಕೀರ್ತನೆಗಳನ್ನು ರಚಿಸಿ, ಸ್ವತಃ ಹಾಡುವ ಮೂಲಕ ಸಮಾಜದಲ್ಲಿ ಮನೆ ಮಾಡಿದ್ದ ಜಾತಿ ಪದ್ಧತಿಗೆ ತೆರೆ ಎಳೆಯಲು ಯತ್ನಿಸಿದ್ದರು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement