ಮೇಲ್ಸೇತುವೆ ನಿರ್ಮಿಸಿ, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ
ಮಾಗಡಿ: ಮೇಲ್ಸೇತುವೆ ನಿರ್ಮಿಸಿ, ಸುಗಮ ರಸ್ತೆ ಸಂಚಾರಕ್ಕೆ ಅಗತ್ಯ ಕ್ರಮ ವಹಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48 ರ ಮರೂರು ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ರಸ್ತೆ ಸಂಚಾರ ತೀವ್ರಗೊಂಡಿದ್ದು, ಶಾಲಾ ಮಕ್ಕಳು, ವಯೋವೃದ್ಧರು ಹೆದ್ದಾರಿ ರಸ್ತೆ ದಾಟಲಾಗದೆ ಅಪಘಾತದ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿ ಯಾವುದೇ ಸಂಚಾರ ಸೂಚನಾ ನಾಮ ಫಲಕವಿಲ್ಲ. ಸಿಗ್ನಲ್ ಲ್ಲೈಟ್ ಅಳವಡಿಸಿಲ್ಲದ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ರ ಮರೂರು ಹ್ಯಾಂಡ್ ಪೋಸ್ಟ್ ವೃತ್ತದ ಬಳಿ ನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸುತ್ತಿವೆ. ವರ್ಷದಿಂದೀಚೆಗೆ ಲೆಕ್ಕವಿಲ್ಲದಷ್ಟು ಅಪಘಾತಗಳು ನಡೆದಿವೆ. ಇಲ್ಲಿ ನಾಲ್ಕು ಕಡೆಯಿಂದಲೂ ರಸ್ತೆಯಿದ್ದು, ಯಾವ ಮಾರ್ಗದಿಂದ ವಾಹನಗಳು ಬರುತ್ತಿವೆ ಎಂದು ಗಮನಿಸಲಾಗುತ್ತಿಲ್ಲ ಈ ಸಂಬಂಧ ಸುಗಮ ಸಂಚಾರಕ್ಕೆ ಅಗತ್ಯ ಅನುಕೂಲ ಕಲ್ಪಿಸುವಂತೆ ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾಗಿ ಎಂ.ಎಚ್. ಸುರೇಶ್, ರಾಜಣ್ಣ, ಮರಿಗೌಡ ತಿಳಿಸಿದ್ದಾರೆ.