ಲಾಟರಿ ಟಿಕೆಟ್ ಮಾರುತ್ತಿದ್ದ ವ್ಯಕ್ತಿ ಬಂಧನ
ಚನ್ನಪಟ್ಟಣ: ಅಕ್ರಮವಾಗಿ ಹೊರ ರಾಜ್ಯದ ಲಾಟರಿ ಟಿಕೆಟ್ ಮಾರುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ಅಬಕಾರಿ ಮತ್ತು ಲಾಟರಿ ನಿಷೇದ ದಳದ ಪೊಲೀಸರು ಆತನ ಬಳಿಯಿದ್ದ ಕೇರಳ ರಾಜ್ಯದ 40 ಲಾಟರಿ ಟಿಕೆಟ್‌ಗಳನ್ನು ವಶಪಡಿಸಿಕೊಂಡಿರುವ ಘಟನೆ ಇಲ್ಲಿನ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಲಾಟರಿ ಮಾರುತ್ತಿದ್ದ ಕರಿಯಪ್ಪನ ದೊಡ್ಡಿ ಗ್ರಾಮದ ಮಂಜುನಾಥ್ ಎಂಬುವರನ್ನು ವಶಕ್ಕೆ ತೆಗೆದುಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.