ಸಾಂಸ್ಕೃತಿಕ ಸೌರಭ, ವಿಚಾರ ಸಂಕಿರಣ ಕಾರ್ಯಕ್ರಮ
ಚನ್ನಪಟ್ಟಣ: ರಾಮನಗರ ಸಮನ್ವಯ ಟ್ರಸ್ಟ್‌ವತಿಯಿಂದ ಸಾಂಸ್ಕೃತಿಕ ಸೌರಭ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮಪಟ್ಟಣದ ಕೋಟೆಯಲ್ಲಿರುವ ಸಂಸ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಭೋದಿ ಮಿಷನ್‌ನ ಭಂತೆ ಬುದ್ದಪ್ರಕಾಶ್ ವಹಿಸಲಿದ್ದು, ಪ್ರಕೃತಿ ಪ್ರೇಮಿ ಎಂ.ಎಲ್.ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಂಗಭೂಮಿ ಕಲಾವಿದ ಸಿದ್ದಾರಾಜು ಎಂ.ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಉಪನ್ಯಾಸಕ ಬಿ.ಪಿ.ಸುರೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ಜೆ.ಗೋವಿಂದರಾಜು, ಮೂಲವ್ಯಾದಿ ತಜ್ಞ ಡಾ. ಅಕ್ರಂ ಪಾಷಾ, ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಎಸ್. ಶಿವಕುಮಾರ್, ಶಿಲ್ಪಕಲಾವಿದ ಹರೀಶ್ ಸಾಗರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಮನೆಯಂಗಳದಲ್ಲಿ ಸಾಹಿತ್ಯ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಡಿ.8ರಂದು ಭಾನುವಾರ ಸಂಜೆ 4 ಗಂಟೆಗೆ ಲಕ್ಷ್ಮಿ ನಿವಾಸ 6ನೇ ಅಡ್ಡರಸ್ತೆ(ಉತ್ತರ)ಕೋಟೆ ಚನ್ನಪಟ್ಟಣ. ಮನೆಯಂಗಳ ತಿಂಗಳ ಸಾಹಿತ್ಯ ಹಾಗೂ ಜಾನಪದ ಸಂತ ಮಂಠೇಸ್ವಾಮಿಯವರ ವಿಶೇಷ ಉಪನ್ಯಾಸ ಹಾಗೂ ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
'ಜೆಡಿಎಸ್ ಸದಸ್ಯರ ಸ್ವಾರ್ಥಕ್ಕೆ ಸಭೆ ಮೀಸಲು'
ರಾಮನಗರ: ಜಿ.ಪಂ. ಸಾಮಾನ್ಯ ಸಭೆಯು ಜೆಡಿಎಸ್ ಸದಸ್ಯರ ಸ್ವಾರ್ಥಕ್ಕೆ ಮೀಸಲಾಗಿದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ, ಅಭಿವೃದ್ಧಿ ಬಗ್ಗೆ ಕಾಳಜಿ ಕಾಣದಾಗಿದೆ ಎಂದು ಜಿ.ಪಂ.ನ ಕಾಂಗ್ರೆಸ್ ಸದಸ್ಯ ಇಕ್ಬಾಲ್ ಹುಸೇನ್ ವಿಷಾದಿಸಿದರು. ಸಾಮಾನ್ಯ ಸಭೆ ತರುವಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿಯ ತಿಪ್ಪಸಂದ್ರ ವಸತಿ ನಿಲಯ ನಿರ್ಮಾಣದ ಅವ್ಯವಹಾರ ಕುರಿತು ತನಿಖಾ ತಂಡವನ್ನು ರಚಿಸಲು ಸಭೆ ನಿರ್ಣಯ ಕೈಗೊಂಡ ಬಳಿಕವೂ ಆಡಳಿತ ಪಕ್ಷದ ಸದಸ್ಯರು ಅದೇ ವಿಚಾರ ಪ್ರಸ್ತಾಪಿಸಿ ಕಾಲಹರಣ ಮಾಡಿದರು ಎಂದರು. ಸುಮಾರು ಒಂದೂವರೆ ಗಂಟೆ ಒಂದೇ ವಿಷಯದ ಮೇಲೆ ಚರ್ಚೆ ನಡೆಸಿದ್ದರಿಂದ ಇನ್ನಿತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯವಾಗಿಲ್ಲ. ಜೆಡಿಎಸ್ ಸದಸ್ಯರಿಗೆ ಜನಪರ ಕಾಳಜಿ ಇಲ್ಲವೆಂಬುದು ಇದರಿಂದ ಸಾಬೀತಾಗಿದೆ. ಮಾಗಡಿ ಹಗರಣ ವಿಷಯದಲ್ಲಿ ಸಭಾ ನಡವಳಿಗೂ ಧಕ್ಕೆಯಾಗಿದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಜಿ.ಪಂ. ಸದಸ್ಯರಾದ ರಂಗಸ್ವಾಮಿ, ವೆಂಕಟೇಶಯ್ಯ, ಸೌಭಾಗ್ಯಮ್ಮ, ನಳಿನಾ, ಶಾಂತಮ್ಮ, ಮಂಜುಳಾ ಮರಿದೇವರು, ಮಾದೇವಿ, ಸಿ.ಕೆ.ಗೀತಾ ಹಾಜರಿದ್ದರು.