ಅಡುಗೆ ಅನಿಲ ಸೋರಿಕೆ: ಬೇಕರಿ ವಸ್ತು ನಾಶ
ನೆಲಮಂಗಲ: ಅಡುಗೆ ಅನಿಲದ ಸೋರಿಕೆಯಾಗಿ ಬೇಕರಿಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಪಟ್ಟಣದ ಸುಭಾಷ್ನಗರದಲ್ಲಿ ಗುರುವಾರ ನಡೆದಿದೆ. ಎಸ್.ಎಲ್.ಆರ್ ಬೇಕರಿ ಮಾಲೀಕ ಜಯಣ್ಣ ಪ್ರತಿ ನಿತ್ಯದಂತೆ ಅಡುಗೆ ಅನಿಲಹೊಂದಿದ್ದ ಸ್ಟೌವ್ ಅನ್ನು ಹಚ್ಚಿ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ವಸ್ತುಗಳು ಸುಟ್ಟು ಹೋದವು. ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.