ಇಂದಿನಿಂದ ಶ್ರೀ ಶಿರಡಿ ಸಾಯಿಬಾಬಾರ ವಾರ್ಷಿಕೋತ್ಸವ
ತಿಪಟೂರು: ನಗರದ ಕೆ.ಆರ್.ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬರವರ 58ನೇ ವಾರ್ಷಿಕೋತ್ಸವವು ಶುಕ್ರವಾರದಿಂದ ಡಿ.13ರವರೆಗೆ ಪ್ರತಿದಿನ ಅದ್ಧೂರಿಯಾಗಿ ನಡೆಯಲಿದೆ. ಶ್ರೀ ಸ್ವಾಮಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ, ಗಣಪತಿ ಹೋಮ, ಶ್ರೀ ದುರ್ಗಾ ಗಾಯಿತ್ರಿ ಹೋಮನಡೆಯಲಿವೆ. ಡಿ.7ರಂದು ಭಜನೆ ಮತ್ತು ಭಕ್ತಿಗೀತೆಗಳ ಗಾಯನ ನಡೆಯಲಿದೆ. ಡಿ.8ರಿಂದ ಭಕ್ತಿ ಸುಧಾ ವರ್ಷಿಣಿ, ಡಿ.9ರಂದು ಸಾಹಿತಿ ಹೀರೆಮಂಗಳೂರು ಕಣ್ಣನ್ ಅವರಿಂದ ವಿಚಾರ ಧಾರೆ. ಡಿ.11ಮತ್ತು 12ರಂದು ಸಂಗೀತ ಸಂಜೆ. ಡಿ.13ರಂದು ಮಹಾಮಂಗಳಾರತಿ, ಉಯ್ಯಾಲೋತ್ಸವ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮ ನಡೆಯಲಿವೆ.