ಗೊಂದಲದ ಗೂಡಾದ ಗ್ರಾಪಂ ಬಿಲ್ ಕಲೆಕ್ಟರ್ ಆಯ್ಕೆ ಪ್ರಕ್ರಿಯೆ
ಕುಣಿಗಲ್: ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಆಯ್ಕೆಯ ಪ್ರಕ್ರಿಯೆ ಗೊಂದಲದ ಗೂಡಾಗಿ, ಗ್ರಾಮದಲ್ಲಿ ಹಾಗೂ ಗ್ರಾಪಂ ಸದಸ್ಯರಲ್ಲೆ ಪರ-ವಿರೋಧ ವ್ಯಕ್ತವಾಗಿ, ಒಂದು ಗುಂಪು ಒಬ್ಬ ಅಭ್ಯರ್ಥಿ ಪರ ಧರಣಿ ನಡೆಸಿದ ಘಟನೆ ತಾಲೂಕಿ ಕಿತ್ತನಾಗಮಂಗಲ ಗ್ರಾಪಂನಲ್ಲಿ ನಡೆದಿದೆ.
ಕಿತ್ತನಾಮಂಗಲ ಗ್ರಾಪಂನಲ್ಲಿ ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇದ್ದು ಈ ಹುದ್ದೆಗೆ ಸ್ಥಳೀಯವಾಗೆ ಪ.ಜಾತಿಗೆ ಸೇರಿದ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿ ಶ್ರೀನಿವಾಸ ಮತ್ತು ಪ್ರಕಾಶ ಅರ್ಜಿ ಸಲ್ಲಿಸಿದ್ದರು. ಕಳೆದ ಬುಧವಾರ ಆಯ್ಕೆಪ್ರಕ್ರಿಯೆ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ
ಸಣ್ಣತಾಯಮ್ಮ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದು, 14 ಮಂದಿ ಸದಸ್ಯರ ಸಭೆಯಲ್ಲಿ ಇಬ್ಬರಿಗೂ ತಲಾ 7 ಮಂದಿ ಸದಸ್ಯರು ಬೆಂಬಲಿಸಿದರು. ಆಗ ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಯಿತು.
ಈ ಮಧ್ಯೆ ವಿದ್ಯಾರ್ಹತೆ ಆಧಾದ ಮೇಲೆ ಆಯ್ಕೆಗೆ ಕೆಲ ಸದಸ್ಯರು ಒಮ್ಮತ ವ್ಯಕ್ತಪಡಿಸಿದರೆನ್ನಲಾಗಿದ್ದು ಈ ವಿಷಯವಾಗಿ ಸದಸ್ಯರಲ್ಲೆ ಭಿನ್ನಮತ ಏರ್ಪಟ್ಟು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗದೆ ಮುಂದೂಡಲಾಯಿತು.
ಕೆಲ ಸದಸ್ಯರು ಹೆಚ್ಚಿನ ಅಂಕಗಳಿಸಿರುವ ಪ್ರಕಾಶ್ ಆಯ್ಕೆಗೆ ಸಹಮತ ವ್ಯಕ್ತಪಡಿಸಿ ಅವರನ್ನೇ ಘೋಷಿಸುವಂತೆ ಒತ್ತಡ ಹೇರಿದರೆ, ಮತ್ತೆ ಕೆಲ ಸದಸ್ಯರು ಇದಕ್ಕೆ ವಿರೋಧಿಸಿ ಶೇಕಡವಾರು ಆಧಾರದ ಮೇಲೆ ಆಯ್ಕೆ ಮಾಡುವುದಿದ್ದರೆ ಸಾಮಾನ್ಯಸಭೆಯಲ್ಲಿ ಆಯ್ಕೆ ಏಕೆ ಮಾಡಬೇಕೆಂಬ ವಾದ ಮಂಡಿಸಿದರು. ಮುಂದಿನ ಸಭೆಯಲ್ಲಿ ತೀರ್ಮಾನಿಸುವಂತೆ ಆಗ್ರಹಿಸಿದ್ದರಿಂದ ಪುನ ವಾದ - ವಿವಾದ ಏರ್ಪಟ್ಟು ಗ್ರಾಪಂ ಆವರಣ ಗೊಂದಲದ ಗೂಡಾಯಿತು. ಪಿಡಿಒ ಆನಂದ್ ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.
ಗುರುವಾರ ಬೆಳಗ್ಗೆ ಕೆಲ ಗ್ರಾಮಸ್ಥರು ಮುಖಂಡರಾದ ಜಯರಾಮ್, ಬಾಬಣ್ಣ ಇತರರ ನೇತೃತ್ವದಲ್ಲಿ ಪ್ರಕಾಶ್ ಅವರನ್ನು ಆಯ್ಕೆ ಮಾಡುವಂತೆ, ತಾಪಂ ಕಚೇರಿಯಲ್ಲಿ ಪಿಡಿಒ, ದಾಖಲೆಗಳನ್ನು ತಿದ್ದಿ ಶ್ರೀನಿವಾಸ್ಗೆ ಸಹಕಾರ ನೀಡಿದ್ದಾರೆಂದು ಆರೋಪಿಸಿ, ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.