ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆಲ, ಜಲ, ಭಾಷೆ ಉಳಿಸಲು ಪಣ ತೋಡಬೇಕು

Mainashree
Updated On : 5 Dec 2013, 11:28 am

ನೆಲಮಂಗಲ: ಕನ್ನಡಿಗರಾದ ನಾವು ನಮ್ಮ ನೆಲ, ಜಲ ಮತ್ತು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು ಪಣತೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ಅವರು ಗುರುವಾರ ತಾಲೂಕಿನ ಸೋಂಪುರದಲ್ಲಿ ಕರವೇ ಆಯೋಜಿಸಿದ್ದ 7ನೇ ವರ್ಷದ ಕನ್ನಡ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ  ಕರ್ನಾಟಕ ಸರ್ಕಾರವನ್ನು ಹೀನಾಯವಾಗಿ ನಿಂದಿಸಿದ ಎಂ.ಇ.ಎಸ್ ಪಕ್ಷದ ಶಾಸಕ ಸಂಭಾಜಿ ಪಾಟೀಲ್ ಮೇಲೆ ಕ್ರಮ ತೆಗೆದುಕೊಳ್ಳಲು ಶಕ್ತರಿಲ್ಲದ ಗೃಹ ಮಂತ್ರಿ ಕೆ.ಜೆ.ಜಾರ್ಜ್ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ನಮ್ಮ ಜನ ನಾಯಕರ ಮೇಲೆ ಒತ್ತಡ ತಂದು ರಾಜ್ಯವನ್ನು ರಕ್ಷಿಸಬೇಕಿದೆ. ನಾಡಿನ ಇತಿಹಾಸ ಬಲ್ಲವರನ್ನು ಮತ್ತು ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ ಮತ್ತು ಅಭಿಮಾನ ಇರುವವರನ್ನೇ ಮುಂದಿನ ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದರು.  ಮಾಜಿ ಸಚಿವ ಉಮೇಶ್ ಕತ್ತಿ ರಾಜ್ಯವನ್ನು ಇಬ್ಭಾಗ ಮಾಡಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು. ಶಿವಗಂಗೆಯ ಮೇಲಣಗವಿ ಮಠದ ಮಲಯ ಶಾಂತಮುನಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡುತ್ತಾ   ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಕನ್ನಡಿಗರು ಜಾತಿ ಮತ ಭೇದವಿಲ್ಲದೆ ಶ್ರಮಿಸಿದ್ದಾರೆ. ಇದರ ಫಲವೇ ರಾಷ್ಟ್ರದಲ್ಲಿಯೇ ಕನ್ನಡ ಭಾಷೆಯ ಕೀರ್ತಿ ಬೆಳೆದು ನಿಂತಿದೆ. ಇದನ್ನು ಉಳಿಸಿಕೊಂಡು ಮತ್ತಷ್ಟು ಬಲಿಷ್ಠವಾಗಿ ಬೆಳೆಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದರು.
ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕೈಗಾರಿಕೆಗಳು ಸ್ಥಾಪನೆಯಾಗಿದ್ದರೂ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಆದ್ದರಿಂದ ಕರವೆ ಈ ನಿಟ್ಟಿನಲ್ಲಿ ಮುಂದೆ  ಕನ್ನಡಿಗರಿಗೆ ಉದ್ಯೋಗ ನೀಡಲು ಶ್ರಮಿಸಬೇಕು ಎಂದರು. ರಾಷ್ಟ್ರ ಪ್ರಶಸ್ತಿ ವಿಜೇತ ಹೊನ್ನೇನಹಳ್ಳಿ ಮುಖ್ಯ ಶಿಕ್ಷಕ ಪುಟ್ಟರುದ್ರಾರಾಧ್ಯ ಅವರನ್ನು ಸೋಂಪುರ ಘಟಕ ಕರವೆ ಅಧ್ಯಕ್ಷ ವಿ.ಮಂಜುನಾಥ್ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ವನಕಲ್ಲು ಮಠದ ಪೀಠಾಧ್ಯಕ್ಷ ಬಸವ ರಮಾನಂದ ಸ್ವಾಮೀಜಿ, ತ್ಯಾಮಗೊಂಡ್ಲು ಜಿ.ಪಂ.ಸದಸ್ಯ ವೇಣುಗೋಪಾಲ್ ಮಾತನಾಡಿದರು. ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ ಅಂದಾನಪ್ಪ, ತುಮಕೂರು ಕರವೇ ಜಿಲ್ಲಾಧ್ಯಕ್ಷ ವಿಷ್ಣುವರ್ಧನ, ರಾಜ್ಯ ಉಪಾಧ್ಯಕ್ಷ ಬೊಮ್ಮಲಿಂಗೇಗೌಡ, ಗೌರವಾಧ್ಯಕ್ಷರಾದ ಮೋಹನ್‌ಕುಮಾರ್, ಶ್ರೀನಿವಾಸ್, ಸೋಂಪುರ ಗ್ರಾ.ಪಂ. ತೀರ್ಥಪ್ರಸಾದ್, ಜಗದೀಶ್‌ಚೌಧರಿ, ಯರ್ರನ್ನಪಾಳ್ಯ ರಾಮಕೃಷ್ಣಯ್ಯ, ವೆಂಕಟೇಶ್, ಸಂತೋಷ್‌ಕುಮಾರ್, ನಿತಿನ್, ವೆಂಕಟೇಶ್, ಲೋಕೇಶ್, ವಸಂತ್ ಹಾಗೂ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement