ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿ
ಮಾಗಡಿ: ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ತಗ್ಗೀಕುಪ್ಪೆ ರಾಮಕೃಷ್ಣಯ್ಯ ತಿಳಿಸಿದರು.
ಅವರು ಪಟ್ಟಣದ ಕೆಂಪೇಗೌಡ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅವುಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೆ ಎಲೆಮರೆಯ ಕಾಯಿಯಂತೆ ಪ್ರತಿಭೆ ನಶಿಸಿ ಹೋಗುತ್ತದೆ. ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರತಿಭಾವಂತ ಮಕ್ಕಳಿಗೆ ಹೆಚ್ಚು ಸಹಕಾರಿ ಎಂದರು. ಶೈಕ್ಷಣಿಕ ಸಮಿತಿ ಅಧ್ಯಕ್ಷ ಎಂ. ರೇವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್.ನಂಜಯ್ಯ, ಇಸಿಓ ಪರಮೇಶ್ವರ್, ಸಿ.ಆರ್.ಪಿ, ಜಗದೀಶ್, ಸೀಬೇಗೌಡ, ರಾಜಗೋಪಾಲ್, ಕೆ.ಪಿ. ಪ್ರಹ್ಲಾದ್ ರಾವ್, ರಾಮಾಂಜನೇಯ, ಆರ್.ಬಿ. ಅರಸನಾಳ್, ಸಿದ್ದೇಶ್, ರಾಮಕೃಷ್ಣಯ್ಯ, ರಾಜು ಇತರರು ಇದ್ದರು.