ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯುವ ಕಾಂಗ್ರೆಸ್ ಮತಗಟ್ಟೆ ಸಮಿತಿಗೆ ಚುನಾವಣೆ

Mainashree
Updated On : 5 Dec 2013, 11:30 am

ಕ.ಪ್ರ.ವಾರ್ತೆ  ದೊಡ್ಡಬಳ್ಳಾಪುರ  ಡಿ.5
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಮಟ್ಟದ ಮತಗಟ್ಟೆ ಹಂತದ ಸಮಿತಿಗಳಿಗೆ ಯುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಚುನಾವಣೆ ಗುರುವಾರ ಆರಂಭವಾಯಿತು.
ಗುರುವಾರ ಮತಗಟ್ಟೆ ಸಂಖ್ಯೆ 1ರಿಂದ 132ರವರೆಗಿನ ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮತದಾರರು ಮತ ಚಲಾಯಿಸಿದರು. ಈ ಮತಗಟ್ಟೆ ಸಮಿತಿಗಳಿಗೆ ಮೊದಲ ದಿನ ಚುನಾವಣೆ ನಡೆಯಿತು. ಇಲ್ಲಿನ ಸೋಮೇಶ್ವರ ಬಡಾವಣೆಯಲ್ಲಿರುವ ತಾಲೂಕು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚುನಾವಣೆ ನಡೆಯಿತು. ಬೆಳಗ್ಗೆ ಆರಂಭವಾದ ಚುನಾವಣೆ ಬಿರುಸಿನಿಂದ ನಡೆಯಿತು. ಮತದಾನದ ಹಕ್ಕು ಹೊಂದಿದ್ದ ಕಾಂಗ್ರೆಸ್ ಪಕ್ಷದ ಯುವ ಸದಸ್ಯರು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಕಾಂಗ್ರೆಸ್ ಸಮಿತಿಯಿಂದ ನಿಯೋಜಿತವಾಗಿದ್ದ ಸಿಬ್ಬಂದಿ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ಗುರುವಾರ ಬಹುತೇಕ ನಗರ ವ್ಯಾಪ್ತಿಯ ಮತಗಟ್ಟೆಗಳ ಚುನಾವಣೆ ನಡೆಯಿತು.
ಉಳಿದ ಮತಗಟ್ಟೆಗಳಲ್ಲಿ ಇಂದು ಮತದಾನ: 228 ಮತಗಟ್ಟೆಗಳ ಪೈಕಿ 132 ಮತಗಟ್ಟೆಗಳ ಚುನಾವಣೆ ಗುರುವಾರ ನಡೆದಿದ್ದು, ಉಳಿದ 96 ಮತಗಟ್ಟೆಗಳ ಚುನಾವಣೆ ಶುಕ್ರವಾರ ನಡೆಯಲಿದೆ. ಮುಖ್ಯವಾಗಿ ಗ್ರಾಮಾಂತರ ಪ್ರದೇಶದ ಮತಗಟ್ಟೆಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಶುಕ್ರವಾರದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈ ಬಾರಿ ಒಟ್ಟು 2850 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement