ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಲಾ ಮಕ್ಕಳು ಯೋಜನೆ ಸದುಪಯೋಗ ಪಡೆದುಕೊಳ್ಳಲಿ

Mainashree
Updated On : 5 Dec 2013, 11:27 am

ರಾಮನಗರ: ಬಡ ಮತ್ತು ಮಧ್ಯಮ ವರ್ಗದ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರವು ಬೈಸಿಕಲ್‌ಗಳನ್ನು ವಿತರಿಸುತ್ತಿದೆ. ಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕ ಎಸ್.ಪಿ.ಹೊದ್ಲೂರು ತಿಳಿಸಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಾಲೆಯಲ್ಲಿ ಮಕ್ಕಳಿಗೆ ಬೈಸಿಕಲ್ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲೆ ತಲುಪಲು ಅನುಕೂಲವಾಗಲೆಂದು ಸರ್ಕಾರ ಬೈಸಿಕಲ್ ನೀಡುತ್ತಿದ್ದು, ಸೈಕಲ್ ಸವಾರಿ ಮಾಡಿದರೆ ಆರೋಗ್ಯವೂ ಉತ್ತಮವಾಗಲಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗಾಳಿ ತುಂಬಿಸುವ, ಪಂಕ್ಚರ್ ಹಾಕುವ ಉಪಕರಣಗಳನ್ನು ಶಾಲೆಗೆ ನೀಡಲಾಗಿದೆ. ತಿಂಗಳಿಗೊಮ್ಮ ಸೈಕಲ್ ರಿಪೇರಿಯನ್ನು ಸರ್ಕಾರವೇ ಮಾಡಿಸುತ್ತದೆ. ಮಕ್ಕಳು ನಿತ್ಯ ಶಾಲೆಗೆ ಸೈಕಲ್‌ನಲ್ಲಿ ಬರುತ್ತಿರುವ ಬಗ್ಗೆ ಹಾಜರಿ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಸೈಕಲ್ ಪಡೆದಿರುವ ಪ್ರತಿ ವಿದ್ಯಾರ್ಥಿಯೂ ಬೈಸಿಕಲ್‌ನಲ್ಲಿ ಬರುವುದು ಕಡ್ಡಾಯ ಎಂದು ಹೇಳಿದರು.
ಸೈಕಲ್ ಸವಾರಿ ಪರಿಸರ ಸ್ನೇಹಿಯಾಗಿದ್ದು, ಜತೆಗೆ ಅತ್ಯಮೂಲ್ಯವಾದ ವಿದೇಶಿ ವಿನಿಮಯವನ್ನು ಉಳಿಸಬಹುದು. ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸುತ್ತಿರುವುದರಿಂದ ಮಕ್ಕಳಲ್ಲಿ ಕೀಳರಿಮೆಯನ್ನು ತೊಲಗಿಸಿ ಸಮಾನತೆ ಸಾಧಿಸಲು, ಪರಿಸರ ಪ್ರಜ್ಞೆ ಬೆಳೆಸಲು ಸಹಕಾರಿಯಾಗಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಸೈಕಲ್ ವಿತರಣೆ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ, ವಿಜ್ಞಾನ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇನ್‌ಸ್ಪೈರ್ ಪುರಸ್ಕಾರ ನೀಡುತ್ತಿದೆ ಎಂದು ಬಿಇಒ ಕಚೇರಿಯ ಶೈಕ್ಷಣಿಕ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ತಿಳಿಸಿದರು.
ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಜೀವನ ನಡೆಸಿದರೆ ಸರ್ಕಾರದ ಉದ್ದೇಶ ಈಡೇರಲಿದೆ ಎಂದರು.
ಶಾಲೆಯ 48 ವಿದ್ಯಾರ್ಥಿನಿಯರಿಗೆ ಬೈಸಿಕಲ್‌ಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಷಡಕ್ಷರದೇವ, ರಾಘವೇಂದ್ರ, ಜಿ.ಶಿವಣ್ಣ, ಮಧುಸೂದನ್, ಹಾಲೇಶ್, ಮಹದೇವ್, ಪಿ.ವಿ.ಅನಿತಾ, ಸುಕನ್ಯಾ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement