ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಹಜ, ಸರಳ ಜೀವನಕ್ಕೆ ನಿಶ್ಚಲ ಮನಸ್ಸು ಮುಖ್ಯ

Mainashree
Updated On : 5 Dec 2013, 11:28 am

ದೊಡ್ಡಬಳ್ಳಾಪುರ: ಇಲ್ಲಿನ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ ಸಂತೋಷದಾಯಕ ಜೀವನಕ್ಕಾಗಿ ಸುದರ್ಶನ ಕ್ರಿಯಾ ಯೋಗ ಶಿಬಿರ ಕನ್ನಡ ಜಾಗೃತ ಭವನದಲ್ಲಿ 6 ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು.
ನೂರಾರು ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಯೋಗ, ಧ್ಯಾನ ಮತ್ತು ಇತರ ಜೀವನ ಕಲೆಗಳ ಅಧ್ಯಯನ ಮತ್ತು ಪ್ರಾಯೋಗಿಕ ಜ್ಞಾನ ಪಡೆದರು. ಸುಮಾರು 60ಕ್ಕೂ ಹೆಚ್ಚು ಜನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರು, ಸಾರ್ವಜನಿಕರು, ಮಹಿಳೆಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳೂ ಕೂಡ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು.
ಶಿಬಿರದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂತರರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ಸಿಬ್ಬಂದಿ ಡಾ.ರಿಚಾ ಛೋಪ್ರಾ ಭಾಗವಹಿಸಿದ್ದರು. ಅವರು ಮಾತನಾಡಿ ಜೀವನಕ್ರಿಯೆ ಯೋಗ, ಧ್ಯಾನ ಮತ್ತು ಇತರ ಶಿಸ್ತುಬದ್ಧ ಪ್ರಕ್ರಿಯೆಗಳಿಗೆ ಪೂರಕವಾಗಿ ಬೆಳೆಯಬೇಕು ಎಂದರು.
ಆರ್ಟ್ ಆಫ್ ಲಿವಿಂಗ್‌ನ ಪದಾಧಿಕಾರಿಗಳು ಮತ್ತು ತರಬೇತುದಾರರು ಹಾಜರಿದ್ದರು.
ಮೆಗಾ ಶಿಬಿರ: ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳ ಒತ್ತಾಯದ ಮೇರೆಗೆ ಆರ್ಟ್ ಆಫ್ ಲಿವಿಂಗ್‌ನ ಮೆಗಾ ಶಿಬಿರವನ್ನು ದೊಡ್ಡಬಳ್ಳಾಪುರ ಕೇಂದ್ರದಲ್ಲಿ ಬರುವ ಡಿ.10ರಿಂದ 15ರವರೆಗೆ ಕನ್ನಡ ಜಾಗೃತ ಭವನದಲ್ಲೇ ನಡೆಸಲು ನಿರ್ಧರಿಸಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತರು ವೆಂಕಟಸ್ವಾಮಿ(8951366305) ಅಥವಾ ಸುನಿಲ್(8951180019) ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement