ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ಶಿಕ್ಷಕರ ಸಭೆ

Rashmi Kasaragodu
Updated On : 7 Dec 2013, 12:45 pm

ದೊಡ್ಡಬಳ್ಳಾಪುರ: ತಾಲೂಕಿನ ಮೋಪರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಶೆಟ್ಟಿಹಳ್ಳಿ ಕ್ಲಸ್ಟರ್ ಮಟ್ಟದ ಶಿಕ್ಷಕರ ಸಮಾಲೋಚನಾ ಸಭೆ ಡಿ.7ರ ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿ ಸುನೀಲ್, ಸಿಆರ್‌ಪಿ ಪದ್ಮಾವತಮ್ಮ, ಉಪನ್ಯಾಸಕ ಎಂ.ಚಿಕ್ಕಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತೇಗೌಡ, ಮುಖ್ಯ ಶಿಕ್ಷಕಿ ಮಂಗಳಾಕುಮಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿವೇಕ ಜಯಂತಿ
ವಿಜಯಪುರ: ವಿಜಯಪುರದ 20ನೇ ವಾರ್ಡಿನಲ್ಲಿ ವಿವೇಕಾನಂದರ 150ನೇ ಜಯಂತಿ ಪ್ರಯುಕ್ತ ಶಕ್ತಿ ಸಂವರ್ಧಿನಿ ಸಂಘದ ವತಿಯಿಂದ ಪಟ್ಟಣದ  ಮನೆ-ಮನೆಗಳಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ವಿತರಿಸಲಾಯಿತು.
ಅಂಬೇಡ್ಕರ್ ಸ್ಮರಣೆ
ದೊಡ್ಡಬಳ್ಳಾಪುರ: ಇಲ್ಲಿನ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹಲವು ದಲಿತ ಸಂಘಟನೆಗಳ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ್‌ಪ್ರಸಾದ್ ಮತ್ತು ರಾಜ್ಯ ಸಂಚಾಲಕ ಒ.ಎಂ.ನಾರಾಯಣಸ್ವಾಮಿ ನೇತೃತ್ವ ವಹಿಸಿದ್ದರು. ತಾಲೂಕು ಮುಖಂಡರಾದ ಚೆಲುವಹನುಮಯ್ಯ, ಎಸ್.ಬಿ.ರಾಮಚಂದ್ರಪ್ಪ, ಟಿ.ವೀರಸ್ವಾಮಿ, ನಾಗರಾಜ್ ಮತ್ತು ಸಂಘಟನೆಯ ಎಲ್ಲ ಮುಖಂಡರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement