ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕರ್ತವ್ಯ ಲೋಪ: ಇಬ್ಬರು ಗ್ರಾಪಂ ಸಿಬ್ಬಂದಿ ವಜಾ

Rashmi Kasaragodu
Updated On : 7 Dec 2013, 12:46 pm

ಚನ್ನಪಟ್ಟಣ: ರಾಜೀವ್‌ಗಾಂಧಿ ವಸತಿ ಯೋಜನೆಯ ಚಕ್ ಅನ್ನು ಫಲಾನುಭವಿಗೆ ವಿತರಿಸದೆ ಅಕ್ರಮವಾಗಿ ದುರ್ಬಳಕೆ ಮಾಡಿ ಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಜೆ.ಬ್ಯಾಡರಹಳ್ಳಿ ಗ್ರಾ ಪಂ ಕರ ವಸೂಲಿಗಾರ ಮತ್ತು ಕಂಪ್ಯೂಟರ್ ಆಪರೇಟರ್ ಅನ್ನು ಪಂಚಾಯಿತಿ ಕೆಲಸದಿಂದ ವಜಾ ಮಾಡಲಾಗಿದೆ. ಶುಕ್ರವಾರ ನಡೆದ ಗ್ರಾ.ಪಂ ಸದಸ್ಯರ ಸಭೆಯಲ್ಲಿ  ಅವ್ಯವಹಾರವನ್ನು ತೀವ್ರವಾಗಿ ಖಂಡಿಸಿದ ಸದಸ್ಯರು ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ರಕ್ಷಿಸಬಾರದೆಂದು ಒಕ್ಕೊರಲ ಅಭಿಮತ ವ್ಯಕ್ತಪಡಿಸಿದರಲ್ಲದೆ, ಕೂಡಲೇ ಕರ ವಸೂಲಿಗಾರ ನವೀನ್ ಮತ್ತು ಕಂಪ್ಯೂಟರ್ ಆಪರೇಟರ್ ಮಧುಸೂದನ್‌ನನ್ನು ಸೇವೆಯಿಂದ ವಜಾಗೊಳಿಸುವ ನಿರ್ಣಯ ಪಾಸು ಮಾಡಿದರು.
ಠಾಣೆಯಲ್ಲಿ ದೂರು: ಪ್ರಕರಣಕ್ಕೆ ಸಂಬಂಧಿಸಿದಂತೆ  ಅಕ್ಕೂರು ಪೊಲೀಸ್ ಠಾಣೆಯಲ್ಲಿ ಫಲಾನುಭವಿ ಶಿವಲಿಂಗಮ್ಮ ಸಲ್ಲಿಸಿದ ದೂರಿನ ವಿಚಾರಣೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬ್ಯಾಂಕ್  ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋಗೆ ಮೊರೆ ಹೋಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ವಿಡಿಯೋ ಸಹಾಯದಿಂದ ಪತ್ತೆ ಹಚ್ಚಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಇಒ ಭೇಟಿ: ಅವ್ಯವಹಾರದ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗ್ರಾ.ಪಂ ಸದಸ್ಯರು ಮತ್ತು ಫಲಾನುಭವಿ ಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಕಲೆಹಾಕಿದ್ದಾರೆ. ಅಗತ್ಯ ಮಾಹಿತಿ ಕೋರಿ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement