ಜೆಸಿಐ ಪದಾಧಿಕಾರಿಗಳ ಪದಗ್ರಹಣ
ವಿಜಯಪುರ: ಜೆಸಿಐ ಸಂಸ್ಥೆಯು ವೃತ್ತಿ ವಿಕಾಸ ಸಂಸ್ಥೆಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅನೇಕ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವುದು ಶ್ಲಾಘನೀಯಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜೆಸಿಐ 30ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೆಸಿಐ ನಿರ್ಗಮಿತ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಮಾತನಾಡಿ, ಕಳೆದ ಸಾಲಿನಂತೆ ಈ ಬಾರಿ ಮತ್ತಷ್ಟು ಕಾರ್ಯಕ್ರಮ ಸಂಸ್ಥೆ ಮೂಲಕ ನಡೆಯಲಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ನೂತನ ಅಧ್ಯಕ್ಷರೊಂದಿಗೆ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಬೋದಿಸಲಾಯಿತು. ಸಂಸ್ಥೆಗೆ ಹೊಸ ಸದಸ್ಯರ ಸೇರ್ಪಡೆ ನಡೆಯಿತು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಗೆ ಸಹಕಾರಿಯಾಗಿರುವವರನ್ನ ಸನ್ಮಾನಿಸಲಾಯಿತು.
ವಿವಿಧ ಸಂಘ ಸಂಸ್ಥೆಗಳಿಂದ ನೂತನ ಅಧ್ಯಕ್ಷರಿಗೆ ಶುಭಾಶಯ ವಿನಿಮಯ ನಡೆಯಿತು.
ವಲಯ ಉಪಾಧ್ಯಕ್ಷ ಡಾ.ಸಿ.ಜೆ.ಜಯಚಂದ್ರ, ನಾಡಪ್ರಭು ಕೆಂಪೇಗೌಡ ಸಂಘದ ಸಂಸ್ಥಾಪಕ ಅಧ್ಯಕ್ಷ ಮುನೇಗೌಡ, ಜೆಸಿಐ ಸಂಸ್ಥಾಪಕ ಅಧ್ಯಕ್ಷ ಮುಕುಂದರಾವ್, ಜೆಸಿಐ ಮಾಜಿ ಅಧ್ಯಕ್ಷರು, ಸಂಘದ ಪದಾಧಿಕಾರಿಗಳು ಪಟ್ಟಣದ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.