ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಪ್ರತಿಭೆಗೆ ತಕ್ಕಂತೆ ಬೆಂಬಲ ನೀಡಿ'

Rashmi Kasaragodu
Updated On : 7 Dec 2013, 12:52 pm

ದೇವನಹಳ್ಳಿ: ಯಲಹಂಕ ಉಪನಗರದಲ್ಲಿ ಪ್ರಕೃತಿ ವೆಲ್‌ಫೇರ್ ಫೌಂಡೇಷನ್ ಇಲ್ಲಿನ ಕನ್ನಮಂಗಲ   ಮಾರುತಿ ವಿದ್ಯಾಮಂದಿರದಲ್ಲಿ ಚಿಕ್ಕಮಕ್ಕಳಿಗಾಗಿ ಚಿಗುರು ಮತ್ತು 8ರಿಂದ10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡುವ 15 ದಿನಗಳ ಶಿಬಿರ ಆಯೋಜಿಸಿತ್ತು.
ಶಿಬಿರದ ಸಮಾರೇಪ ಸಮಾರಂಭದಲ್ಲಿ ಪ್ರಕೃತಿ ವೆಲ್‌ಫೇರ್ ಫೌಂಡೇಷನ್ ಸಂಸ್ಥಾಪಕಿ ಪ್ರೇಮಲತಾ ಗಂಗಾಧರನ್ ಮಾತನಾಡಿ, ಇಂದಿನ ಮಕ್ಕಳಿಗೆ ಬರೀ ಶಿಕ್ಷಣ ಒಂದೇ ಮುಖ್ಯವಲ್ಲ ಮತ್ತು ಪರೀಕ್ಷೆಗಳಲ್ಲಿ ಅಂಕಿಗಳಿಸುವುದೂ ಮುಖ್ಯವಲ್ಲ ಎಂದು ಕಿವಿಮಾತು ಹೇಳಿದರು. ಎಸ್‌ಎಸ್‌ಎಲ್‌ಸಿ ಅಥವ ಪಿಯುಸಿ ಆದ ನಂತರ ಯಾವುದರಲ್ಲಿ ಮುಂದುವರೆಯಬೇಕು ಎಂಬುದೇ ಪ್ರಶ್ನೆಯಾಗಿರುತ್ತದೆ ಅಂಥಹ ಸಂಧರ್ಭದಲ್ಲಿ ನಮ್ಮ ಸಂಸ್ಥೆ ಎಲ್ಲ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡುತ್ತದೆ ಎಂದು ಪ್ರೇಮಲತಾ ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪಾಠಶಾಲಾ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಶಾಲೆಯ ಶಿಕ್ಷಕ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement