ಭಾನುಮತಿ ಶಂಕರೇಗೌಡ ಲಕ್ಷ್ಮೀಪುರ ಗ್ರಾಪಂ ನೂತನ ಅಧ್ಯಕ್ಷೆ
ರಾಮನಗರ: ತಾಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಭಾನುಮತಿ ಶಂಕರೇಗೌಡ ನೂತನ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಮುನಿವೆಂಕಟಮ್ಮ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಾಕಾಂಕ್ಷಿಯಾಗಿ ಭಾನುಮತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಭಾನುಮತಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಲಕ್ಷ್ಮೀಪುರ ಗ್ರಾಪಂನಲ್ಲಿ ಒಟ್ಟು 18 ಸದಸ್ಯರಿದ್ದು, ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತ 11 ಮಂದಿ ಹಾಜರಿದ್ದರು. ಜೆಡಿಎಸ್ ಬೆಂಬಲಿತ 7 ಸದಸ್ಯರು ಗೈರಾಗಿದ್ದರು. ನೂತನ ಅಧ್ಯಕೆಯಾಗಿ ಆಯ್ಕೆಯಾದ ಭಾನುಮತಿ ಶಂಕರೇಗೌಡ ಅವರನ್ನು ತಾಪಂ ಅಧ್ಯಕ್ಷೆ ಲಕ್ಷ್ಮಿಮಂಜುನಾಥ್, ಮುಖಂಡರಾದ ಎಸ್.ಟಿ.ಕಾಂತರಾಜ್ಪಟೇಲ್, ಗಂಗಶಿವು, ಗೋಪಾಲ್, ಸದಸ್ಯರಾದ ಶಿವರಾಜು, ಎಂ.ಆರ್.ರಮೇಶ್, ಮಾರಣ್ಣ, ಮುನಿವೆಂಕಟಮ್ಮ, ಶಿವಲಿಂಗಾಚಾರ್ ಮತ್ತಿತರರು ಅಭಿನಂದಿಸಿದರು.