ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವೇಕಾನಂದ ರಥಯಾತ್ರೆ

Rashmi Kasaragodu
Updated On : 7 Dec 2013, 12:55 pm

ಮಾಗಡಿ: ಇಲ್ಲಿನ ಪೋಲೋಹಳ್ಳಿ ಭವತಾರಿಣಿ ಆಶ್ರಮದ ವತಿಯಿಂದ ಡಿ.9 ರಂದು ಮಧ್ಯಾಹ್ನ 2.30ಕ್ಕೆ ಪಟ್ಟಣದ ಬಸವೇಶ್ವರ ವೃತ್ತದ ಕೆಂಪೇಗೌಡ ಪ್ರತಿಮೆಯಿಂದ ಕಲ್ಯಗೇಟ್ ಸಿದ್ದರೂಢಾಶ್ರಮದವರೆಗೆ 150ನೇ ಸ್ವಾಮಿ ವಿವೇಕಾನಂದ ರಥಯಾತ್ರೆ ಹಮ್ಮಿಕೊಳ್ಳಲಿದೆ.
ಸಂಜೆ 5 ಗಂಟೆಗೆ ಸಿದ್ದರೂಢಾಶ್ರಮದ ಸಮುದಾಯ ಭವನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಪಟ್ಟಣದ ರಾಮರಾಜ ಅರಸು ರಸ್ತೆ, ವಾಸವಿ ದೇವಸ್ಥಾನ ರಸ್ತೆ, ರಾಜಕುಮಾರ್ ರಸ್ತೆ ಮೂಲಕ ಸಿದ್ದರೂಢಾಶ್ರಮದವರೆಗೆ ಸ್ವಾಮಿ ವಿವೇಕಾನಂದ ರಥಯಾತ್ರೆ ಸಾಗಿ ಬರಲಿದೆ. ಬೆಂಗಳೂರಿನ ರಾಮಕೃಷ್ಣ ಮಠದ ತ್ಯಾಗೀಶ್ವರಾನಂದಜೀ, ಮಹಾವಾಕ್ಯಾನಂದಜೀ ಹಾಗೂ ಭವತಾರಣಿ ಆಶ್ರಮದ ಮಾತಾ ವಿವೇಕಾಮಯಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪುರನಾಗರೀಕರು ಭಾಗವಹಿಸಿ ರಥಯಾತ್ರೆ ಯಶಸ್ವಿಗೊಳಿಸುವಂತೆ ಕೆ.ಎಸ್. ಹರೀಶ್  ಮನವಿ ಮಾಡಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement