ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಿವೇಕಾನಂದ ರಥಯಾತ್ರೆ

Rashmi Kasaragodu
Updated On : 7 Dec 2013, 12:55 pm

ರಾಮನಗರ: ರಾಮನಗರದ ಸ್ವಾಮಿ ವಿವೇಕಾನಂದ ರಥ ಯಾತ್ರೆ ಸಮಿತಿಯು ವಿವೇಕಾನಂದರ ರಥಯಾತ್ರೆಯನ್ನು ಡಿ.9ರ ಬೆಳಗ್ಗೆ 9ಕ್ಕೆ ನಗರದ ಮಿನಿ ವಿಧಾನಸೌಧದಿಂದ ನಗರದ ಮುಖ್ಯ ರಸ್ತೆ ಮಾರ್ಗವಾಗಿ ಜೂನಿಯರ್ ಕಾಲೇಜು ಮೈದಾನದವರೆಗೆ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 11ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಸಂಸದ ಡಿ.ಕೆ.ಸುರೇಶ್, ವಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿಲ್ಲಾ ಎಸ್‌ಪಿ ಅನುಪಮ್ ಅಗ್ರವಾಲ್, ಎಂಎಲ್‌ಸಿ ಅಪ್ಸರ್ ಆಗಾ, ಜಿಪಂ ಅಧ್ಯಕ್ಷ ಎಚ್.ಸಿ.ರಾಜು ಭಾಗವಹಿಸುವರು.
ವಿಶೇಷ ತರಬೇತಿ
ರಾಮನಗರ: 2012-13ನೇ ಸಾಲಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ವಿಶೇಷ ಕೋಚಿಂಗ್ ರಗತಿಗಳನ್ನು ನಡೆಸಿ ಅವರ ಶೈಕ್ಷಣಿಕ ಪ್ರಗತಿಯನ್ನು ಕಾಯ್ದುಕೊಳ್ಳಲು ಉನ್ನತ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಿಂದ ವಿದ್ಯಾರ್ಥಿನಿಯರಿಗೆ ಡಿ.10ರಿಂದ ಪ್ರತಿದಿನ ಸಂಜೆ 5 ರಿಂದ 6ರವರೆಗೆ ಎಲ್ಲಾ ವಿಷಯಗಳ ವಿಶೇಷ ತರಗತಿಗಳನ್ನು ನಡೆಸಲಾಗುವುದು.ಅನುತ್ತೀರ್ಣ ವಿದ್ಯಾರ್ಥಿನಿಯರು ಈ ಸದವಕಾಶ ಉಪಯೋಗಿಸಿಕೊಳ್ಳಲು ಪೋಷಕರ ಒಪ್ಪಿಗೆ ಪತ್ರವನ್ನು ಡಿ.10ರೊಳಗೆ ಸಂಸ್ಥೆಗೆ ಸಲ್ಲಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯರನ್ನು ಸಂಪರ್ಕಿಸಲು ಕೋರಿದೆ.
ಮಗು ಪತ್ತಗೆ ಮನವಿ
ರಾಮನಗರ: ಅನಾಥ ಮಗುವೊಂದಕ್ಕೆ ಮಾಗಡಿಯ ಸೋಲೂರಿನ ಸ್ನೇಹಾಲಯ ಶಿಶು ಮಂದಿರದಲ್ಲಿ ತಾತ್ಕಾಲಿಕ ರಕ್ಷಣೆ ಹಾಗೂ ಪೋಷಣೆಗೆ ಸೇರಿಸಲಾಗಿರುತ್ತದೆ. ಮಗುವಿನ ಪೋಷಕರ ಪತ್ತೆಗಾಗಿ ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕ ಪಿ.ಶ್ರೀನಿವಾಸಮೂರ್ತಿ ಮನವಿ ಮಾಡಿದ್ದಾರೆ.
ಮಗುವಿನ ವಿವರ: ಹೆಸರು-ಭೂಮಿಕ, 7 ತಿಂಗಳ ಹೆಣ್ಣು ಮಗು, 60 ಸೆಂ.ಮೀ ಎತ್ತರ, 7.5 ಕೆ.ಜಿ ತೂಕ, ಗೋಧಿ ಮೈಬಣ್ಣ, ದುಂಡು ಮುಖ, ಉತ್ತಮ ದೈಹಿಕ ಮತ್ತು ಮಾನಸಿಕ ಸ್ಥಿತಿ ಹೊಂದಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಗು ದೊರಕಿರುತ್ತದೆ. ಸಂಪರ್ಕಿಸಬೇಕಾದ ವಿಳಾಸ, ಅಧೀಕ್ಷಕರು, ಸರ್ಕಾರಿ ಬಾಲಕಿಯರ ಬಾಲ ಮಂದಿರ, ಕಂದಾಯ ಭವನ, ರಾಮನಗರ. ದೂಣ 080-27271067, ಮೊ-99025-97517.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement