ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ

Rashmi Kasaragodu
Updated On : 8 Dec 2013, 1:12 am

ಮಾಗಡಿ: ತಿಪ್ಪಸಂದ್ರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ. ಧನಂಜಯ ತಿಳಿಸಿದರು.
ಅವರು ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಜಾನಿಗೆರೆ ಗ್ರಾಮ ವ್ಯಾಪ್ತಿಯ ಬಡ ಅರ್ಹ 60 ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿ ಮಾತನಾಡುತ್ತಾ ಜಾನಿಗೆರೆ ಗ್ರಾಮದಲ್ಲಿ ತೀರ ಕಡು ಬಡವರಿದ್ದಾರೆ. ಆಶ್ರಯ ಮನೆಯಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಜಾನಿಗೆರೆ ಗ್ರಾಮದಲ್ಲಿ ಎರಡು ಎಕ್ಕರೆ ಪಂಚಾಯ್ತಿ ವತಿಯಿಂದ ಜಮೀನು ಖರೀದಿಸಿ, ಕಾನೂನುಬದ್ಧವಾಗಿ ನಿವೇಶನ ವಿಂಗಡಿಸಿ, ಅರ್ಹ 60 ಪಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಹಿಂದೆ ವಿತರಣೆಯಾಗಿದ್ದ  ಹಕ್ಕು ಪತ್ರಗಳು ಕಾನೂನುಬದ್ಧವಾಗಿಲ್ಲದ ಕಾರಣ ಅನುರ್ಜಿತವಾಗಿದ್ದವು. ಈಗ ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೆ.ಆರ್. ರವೀಶ್  ಅವರು ಜಿಲ್ಲಾಧಿಕಾರಿಗಳಿಂದ   ಅನುಮೋದನೆ ಪಡೆದು ಕಾನೂನುಬದ್ಧವಾಗಿ ನಿವೇಶನ ವಿಂಗಡಿಸಿದ್ದು, ಬಡ ಅರ್ಹಪಲಾನಭವಗಳಿಗೆ ವಿತರಿಸಲು  ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದು ಧನಂಜಯ ಶ್ಲಾಘಿಸಿದರಲ್ಲದೆ ಚಿಕ್ಕಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಎಕರೆ ಭೂಮಿ ಖರೀದಿಸಿ ಅಲ್ಲಿನ ಬಡಕುಟುಂಬಗಳಿಗೂ ಆಶ್ರಯ ನಿವೇಶನ ಹಂಚಿಕೆ ಮಾಡಿ ವಿತರಿಸಲು ಚಿಂತನೆ ಮಾಡಿದ್ದೇನೆ. ನರೇಗ ಯೋಜನೆಯನ್ನು ವೈಯಕ್ತಿಕ ಪಲಾನುಭವಿಗಳು ಪಡೆದು ಆರ್ಥಿಕವಾಗಿ ಮುಂದೆ ಬರುವಂತೆ ಜನತೆಗೆ ಜಿ.ಪಂ.ಸದಸ್ಯ ಧನಂಜಯ ಕರೆ ನೀಡಿದರು.
ಪರಭಾರೆ ಮಾಡುವಂತಿಲ್ಲ: ಚಿಕ್ಕಮುದಿಗೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜೆ.ಆರ್. ರವೀಶ್  ಮಾತನಾಡಿ ಜಾನಿಗೆರೆ ಗ್ರಾಮದ ನಿರಾಶ್ರಿತ ಬಡ ಅರ್ಹಪಲಾನುಭವಿಗಳಿಗೆ ತೊಂದರೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ನಿವೇಶನ ಹಂಚಿಕೆ ಮಾಡಿಸಲು ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಅರ್ಹ ಪಲಾನುಭವಿಗಳು ಹಕ್ಕುಪತ್ರಗಳನ್ನು ಪಡೆದರೆ ಸಾಲದು, ಪಂಚಾಯ್ತಿಗೆ ಸಲ್ಲಬೇಕಾದ ತೆರಿಗೆ ಪಾವತಿಸಿ ಆದಷ್ಟು ಬೇಗ ಖಾತೆ ಮಾಡಿಸಿಕೊಂಡು ಮನೆಗಳನ್ನು ಕಟ್ಟಿಕೊಳ್ಳಬೇಕು. ಯಾವುದೇ ಕಾರಣಕ್ಕೂ 20 ವರ್ಷಗಳ ಕಾಲ ಪರಭಾರೆ ಮಾಡುವಂತಿಲ್ಲ, ಬಾಡಿಗೆಯನ್ನು ಸಹ ನೀಡುವಂತಿಲ್ಲ. ಸ್ವಂತ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ ಮಂಜೂರಾತಿಗೆ ಯತ್ನಿಸುತ್ತೇನೆ. ಜನತೆ ಮನೆಕಟ್ಟಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಗ್ರಾ.ಪಂ. ಸದಸ್ಯರಾದ ನಾಗರಾಜು, ಲಕ್ಷ್ಮಮ್ಮ, ಪಂಚಾಯ್ತಿ ಕಾರ್ಯದರ್ಶಿ ರಮೇಶ್, ಗ್ರಾಮಸ್ಥರು  ಹಾಗೂ ಪಲಾನುಭವಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement