ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಮಂಡ್ಯ: ಪ್ರವಾಸಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಕಾವೇರಿ ನದಿಯಲ್ಲಿ ನಡೆದಿದೆ. ಚನ್ನಪಟ್ಟಣದ ಮುನೀರ್ ಅಹಮದ್ ಅವರ ಮಗ ಯೂನಿಫ್ (16) ಸಾವನ್ನಪ್ಪಿದ ದುರ್ದೈವಿ. ಚನ್ನಪಟ್ಟಣ ವಿಜಯಾ ಪಬ್ಲಿಕ್ ಶಾಲೆಯ ಮಕ್ಕಳು ಮೈಸೂರು, ಕೆಆರ್ಎಸ್ ಇತರ ಕಡೆಗಳಿಗೆ ತೆರಳಿದ್ದರು. ಬಲಮುರಿ ಕಾವೇರಿ ನದಿ ಶಿಕ್ಷಕಿ ಷಾಜಿಯಾ ಖಾನ್ ಪುತ್ರ ಯೂನಿಫ್ ಪ್ರವಾಸಕ್ಕೆ ಬಂದಿದ್ದ. ಈತ ಬಲಮುರಿ ಕಾವೇರಿ ನದಿಯಲ್ಲಿ ಈಜಲು ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ನುರಿತ ಈಜುಗಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ ಶವವನ್ನು ನದಿಯಿಂದ ಹೊರ ತೆಗೆದು ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಕೆ.ಆರ್.ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಮಪತ್ರ ಸಲ್ಲಿಕೆ
ಸೂಲಿಬೆಲೆ: ರಾಜ್ಯ ಒಕ್ಕಲಿಗರ ಸಂಘಗೆ ನಡೆಯಲಿರುವ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಬೆಂಡಿಗಾನಹಳ್ಳಿ ಗ್ರಾಮದ ಬಿ.ವಿ ರಾಜಶೇಖರ್ಗೌಡ ಹಾಗೂ ಹುಲ್ಲೂರು ಮಂಜುನಾಥ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.