ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನೆಲ್ಸನ್ ಮಂಡೇಲಾ ಮಹಾನ್ ಮಾನವತಾವಾದಿ: ಸತೀಶ್ಕುಮಾರ್

Rashmi Kasaragodu
Updated On : 8 Dec 2013, 1:05 am

ಮಾಗಡಿ: ಆಧುನಿಕ ಜಗತ್ತಿನ ಶಾಂತಿಧೂತ ದಕ್ಷಿಣ ಆಫ್ರಿಕಾದ  ನೆಲ್ಸನ್ ಮಂಡೇಲಾ ಮಹಾತ್ಮ ಗಾಂಧಿಯ ನಂತರ ಅಹಿಂಸೆ ಮತ್ತು ಶಾಂತಿ ಪ್ರತಿಪಾದನೆಗೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಾನವತಾವಾದಿ ಎಂದು ಕಾಂಗ್ರೆಸ್  ಯುವ ಮುಖಂಡ ಬಿ.ವಿ. ಜಯರಾಮು ಅಭಿಪ್ರಾಯ ಪಟ್ಟರು.
ಅವರು ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ  ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನೆಲ್ಸೆನ್  ಮಂಡೇಲಾ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ  ನೆಲ್ಸನ್ ಮಂಡೇಲಾ  ಸಾರ್ವಕಾಲಿಕ ಮಹಾನ್ ನಾಯಕ. ವರ್ಣಬೇಧ ನೀತಿಯ ವಿರುದ್ಧದ ಅವರ ಹೋರಾಟ ಅವಿಸ್ಮರಣೀಯ. ದಶಕಗಳ ಕಾಲ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಅವರು, 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು ಎಂದರು. ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ ಮಾತನಾಡಿ ನೆಲ್ಸನ್ ಮಂಡೇಲಾ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಿಳಿಯ ಅಲ್ಪಸಂಖ್ಯಾತರ ಆಳ್ವಿಕೆಯನ್ನು ಆಫ್ರಿಕಾದಲ್ಲಿ ಅಂತ್ಯಗೊಳಿಸಿದರು ಎಂದರು.
ಪುರಸಭಾ ಮಾಜಿ  ಅಧ್ಯಕ್ಷ ರಂಗಹನುಮಯ್ಯ, ಬೆಂಕಿ ಮಹದೇವ್, ಬೆಳ್ಳಿಯಪ್ಪ, ಹನುಮಂತಯ್ಯ, ನಾಗರಾಜು, ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್, ಶಿಕ್ಷಕ ಮಾರಣ್ಣ, ಸಿದ್ದಲಿಂಗೇಶ್ವರ್, ಜಯಾರಾಮು, ಮೂರ್ತಿ, ನಾರಾಯಣ, ಜಯಕುಮಾರ್, ಪುರುಷೋತ್ತಮ್, ಎಂ.ಎನ್.ಮಂಜು ಇತರರು ಛಲವಾದಿ ಮಹಾಸಭಾ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವಾರು ದಲಿತ, ಪ್ರಗತಿಪರ ಸಂಘಟನೆಗಳು ಸಂತಾಪ ಸೂಚಿಸಿವೆ.


ಅಪಘಾತ: ಕಾರ್ಮಿಕ ಸಾವು
ಹೊಸಕೋಟೆ: ತಾಲೂಕಿನ ಗಂಗಾಪುರ ಗೇಟ್ ರಾಷ್ಟ್ರೀಯ ಹೆದ್ದಾರಿ ಬಳಿ ಸಂಭವಿಸಿದ ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟಿದ್ದಾನೆ. ಬೆಂಗಳೂರಿನ ಬಿಇಎಂಎಲ್ ಕಾರ್ಖಾನೆ ಉದ್ಯೋಗಿ ಸಂಪಂಗಿ ರಾಮನಗರದ ವಾಸಿ ರಾಮಲಿಂರಾರೆಡ್ಡಿ (48) ಮೃತರು. ಅವರು ಚಿತ್ತೂರಿನ ಬಳಿಯ ತನ್ನ ಸ್ವಗ್ರಾಮಕ್ಕೆ ಕುಟುಂಬದ ಸದಸ್ಯರೊಂದಿಗೆ ಕಾರಿನಲ್ಲಿ ತೆರಳಿದ್ದು ಬೆಳಗ್ಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ  ಕಾರು ನಿಯಂತ್ರಣ ಸಪ್ಪಿ ಉರುಳಿಬಿತ್ತು.  ಚಾಲನೆ ಮಾಡುತ್ತಿದ್ದ ರಾಮಲಿಂಗಾರೆಡ್ಡಿ ಸ್ಥಳದಲ್ಲೆ ಮೃತಪಟ್ಟರು. ಕಾರಿನಲ್ಲಿದ್ದ ಪತ್ನಿ ಮಾಲತಿ, ಮಗ ಭರತ್, ಮಗಳು ಹರ್ಷಿತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement