ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಭಾಷೆ ಬದುಕಿನ ಪ್ರಶ್ನೆಯಾದರೆ ಮಾತ್ರ ಕನ್ನಡದ ಉಳಿವು

Rashmi Kasaragodu
Updated On : 8 Dec 2013, 1:06 am

ದೊಡ್ಡಬಳ್ಳಾಪುರ: ಕನ್ನಡ ಬದುಕಿನ ಪ್ರಶ್ನೆಯಾದಾಗ ಮಾತ್ರ ಅದರ ಉಳಿವಿನ ಕುರಿತ ನೈಜ ಕಾಳಜಿ ಪ್ರದರ್ಶಿತವಾಗುತ್ತದೆ. ಕನ್ನಡದ ಅಭಿಮಾನ ಭಾವನಾತ್ಮಕವಾಗಿ ಮಾತ್ರ ಇರದೆ ವಾಸ್ತವದ ನೆಲೆಗಟ್ಟಿನಲ್ಲಿ ಮೂಡಿಬರಬೇಕಿರುವುದು ಇಂದಿನ ಅನಿವಾರ್ಯ ಎಂದು ನಿವೃತ್ತ ಅಧ್ಯಾಪಕ ಬಿ.ಎಲ್. ರಾಮಕೃಷ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಭಾರತೀಯ ಜೀವ ವಿಮಾ ನಿಗಮ ಕಚೇರಿಯಲ್ಲಿ ವಿಮಾ ಪ್ರತಿನಿಧಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬದುಕು ಕಟ್ಟಿಕೊಳ್ಳಲು ಅನಿವಾರ್ಯವೆನಿಸಿದಷ್ಟು ಇಂಗ್ಲಿಷ್ ಕಲಿತರೆ ಸಾಕು. ಆದರೆ ಇಂದು ಕನ್ನಡವನ್ನು ಮರೆತು ಮತ್ತೊಂದು ಭಾಷೆಯನ್ನು ಪ್ರೀತಿಸುವ ವಾತಾವರಣ ನಿರ್ಮಾಣವಾಗುತ್ತಿರುವುದು ದುರಂತ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಲ್ಐಸಿ ಶಾಖಾ ವ್ಯವಸ್ಥಾಪಕ ಚನ್ನಕೇಶವ, ವಿಮಾ ಪ್ರತಿನಿಧಿಗಳ ಸಂಘದ ವಲಯ ಮುಖಂಡ ಚಂದ್ರಶೇಖರ್, ತಾಲೂಕು ಶಾಖೆ ಅಧ್ಯಕ್ಷ ಸೋಮಶೇಖರ್, ಗೌರವಾಧ್ಯಕ್ಷ ಮಾರೇಗೌಡ, ಕಾರ್ಯದರ್ಶಿ ಮಂಜುನಾಥ್, ಕರವೇ ಮುಖಂಡ ಟಿ.ಜಿ.ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement