ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಸುರಕ್ಷಿತ ಬದುಕಿಗೆ ಆದ್ಯತೆ ನೀಡಿ ಏಡ್ಸ್ ತಡೆಗಟ್ಟಿ'

Rashmi Kasaragodu
Updated On : 8 Dec 2013, 1:06 am


ದೊಡ್ಡಬಳ್ಳಾಪುರ: ಸುರಕ್ಷಿತ, ಹೊಣೆಯಾಧಾರಿತ ಬದುಕಿಗೆ ಆದ್ಯತೆ  ನೀಡಬೇಕು. ಕ್ಷಣ ಮಾತ್ರದ ಸುಖಕ್ಕೆ ಆದ್ಯತೆ ನೀಡಿ ಬದುಕನ್ನೇ ಕತ್ತಲಾಗಿಸಿಕೊಳ್ಳುವ ಹುಂಬತನ ಬೇಡ ಎಂದು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜನತೆಗೆ ಕರೆ ನೀಡಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ ನೇತೃತ್ವದಲ್ಲಿ ಶನಿವಾರ ನಡೆದ ಏಡ್ಸ್ ಕುರಿತ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಏಡ್ಸ್ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ಏಡ್ಸ್ ರೋಗ ಬಾರದಂತೆ ತಡೆಯಲು ಇರುವ ಒಂದೇ ಒಂದು ಮಾರ್ಗ ಎಂದರೆ ಸುರಕ್ಷಿತ ಸಾಂಸಾರಿಕ ಜೀವನ. ಸುರಕ್ಷಿತ ಲೈಂಗಿಕತೆ, ಸಂಬಂಧಗಳ ಮೌಲ್ಯವನ್ನು ಅರಿತು ಆರೋಗ್ಯಕರ ಬದುಕನ್ನು ಕಂಡುಕೊಳ್ಳುವುದಾಗಿದೆ. ರೋಗ ಬಂದ ಮೇಲೆ ವಿಷಾದ ಪಡುವುದಕ್ಕಿಂತ ಬಾರದಂತೆ ಎಚ್ಚರ ವಹಿಸುವುದೇ ಬುದ್ಧಿವಂತಿಕೆ.
ಯಾವತ್ತೂ ಗಂಡು-ಹೆಣ್ಣಿನ ಸಂಬಂಧಗಳು ಪವಿತ್ರತೆಯನ್ನು ಹೊಂದಿರಬೇಕು. ಕೇವಲ ಭೋಗ ಜೀವನ ಬಯಸಿದರೆ ಏಡ್ಸ್ನಂತಹ ರೋಗಗಳಿಗೆ ತುತ್ತಾಗಬೇಕಾದೀತು ಎಂಬ ಎಚ್ಚರವನ್ನು ಪ್ರತಿಯೊಬ್ಬರೂ ಹೊಂದಿರಬೇಕು. ಏಡ್ಸ್ಗೆ ಮದ್ದಿಲ್ಲ. ಎಚ್ಚರ ವಹಿಸಿದರೆ ಮಾತ್ರ ಉತ್ತಮ ಬದುಕು ಸಾಧ್ಯ ಎಂಬಿತ್ಯಾದಿ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಸರ್ಕಾರಿ ಕಾಲೇಜಿನಿಂದ ಹೊರತ ಜಾಗೃತಿ ಜಾಥಾದಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತಾಲೂಕು ಕಚೇರಿ ವೃತ್ತದ ಮೂಲಕ ಎಸ್.ನಿಜಲಿಂಗಪ್ಪ ರಸ್ತೆ, ರುಮಾಲೆ ವೃತ್ತ ಮುಖಾಂತರ ಬಸ್ನಿಲ್ದಾಣ ತಲುಪಿ ಜಾಗೃತಿ ಮಾಹಿತಿ ನೀಡಿದರು.  ಅದೇ ರೀತಿ ಕೊಂಗಾಡಿಯಪ್ಪ ಕಾಲೇಜಿನ ವಿದ್ಯಾರ್ಥಿಗಳೂ ವಿವಿಧ ಬೀದಿಗಳಲ್ಲಿ ಸಂಚರಿಸಿ ಏಡ್ಸ್ ಕುರಿತ ಎಚ್ಚರಿಕೆ ಸಂದೇಶ ರವಾನಿಸಿದರು. ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು, ಪ್ರಾಂಶುಪಾಲರು, ರೆಡ್ ರಿಬ್ಬನ್ ಕ್ಲಬ್ ಸಂಚಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement