ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

28 ರೌಡಿಗಳು ಪೊಲೀಸ್ ವಶಕ್ಕೆ: ಬಿ. ರಮೇಶ್

Mainashree
Updated On : 8 Dec 2013, 11:27 am

ನೆಲಮಂಗಲ: ತಾಲೂಕಿನ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಪಟ್ಟಿಯಲ್ಲಿರುವ 28 ರೌಡಿಗಳನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ತಿಳಿಸಿದ್ದಾರೆ.
ಬಂದಿತ 28 ರೌಡಿಗಳನ್ನು ಖಾಸಿಂ, ಎಚ್.ಎಸ್.ಉಮೇಶ್, ಶರವಣ, ಮೋಹನ್‌ಕುಮಾರ್ ಅಲಿಯಾಸ್ ಕುಳ್ಳ, ನಾಗರಾಜು, ಬಸವರಾಜು ಅಲಿಯಾಸ್ ಅಪ್ಪಿ, ಜಿ.ಮೂರ್ತಿ, ಜಬಿ, ಜಪ್ರುಲ್ಲಾ, ಯತೀಶ್, ಮಂಜುನಾಥ, ಗೋವಿಂದರಾಜು, ಹೇಮಂತ್‌ಕುಮಾರ್ ಅಲಿಯಾಸ್ ಹುಸ್ಕೂರು ಶಿವ, ದಿಲೀಪ್, ರಾಜು, ಕೆಂಪರಾಜು, ಮಹಾದೇವಯ್ಯ, ಮಂಜುನಾಥ್, ಧರ್ಮಪ್ರಕಾಶ್, ನಿಂಗೇಗೌಡ, ಕೆಂಪರಾಜು, ಎಚ್.ಡಿ.ಕಿರಣ್, ಮುನಿರಾಜು, ನಾಗರಾಜು, ಕೆಂಪರಾಜು, ಗಿರೀಶ್, ಮೌಲಾ, ಯತೀಶ್ ಅಲಿಯಾಸ್ ಬೆಟ್ಟಹಳ್ಳಿ ಯತೀಶ್  ಎಂದು ಗುರುತಿಸಲಾಗಿದೆ. ತಾಲೂಕಿನ ಪಟ್ಟಣ, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕೆಲ ರೌಡಿಗಳು ಮಾರಕಾಸ್ತ್ರ, ರಿವಾಲ್ವರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಲ್ಲಿ ದಿಢೀರ್ ವಿಶೇಷ ತಂಡ ರಚಿಸಿ ಈ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
28 ಜನ ರೌಡಿಗಳನ್ನು ವೀಕ್ಷಿಸಲು ನೂರಾರು ಜನ ಸಾರ್ವಜನಿಕರು ಠಾಣೆ ಮುಂಭಾಗ ಕುತೂಹಲದಿಂದ ಗುಂಪುಕೂಡಿದ್ದರು
ಕಾರ್ಯಾಚರಣೆಯಲ್ಲಿ ಅಡಿಷನಲ್ ಎಸ್ಪಿ ಅಬ್ದುಲ್ ಅಹಮದ್, ಡಿವೈಎಸ್ಪಿ ಆರ್.ಮಲ್ಲೇಶ್, ಸರ್ಕಲ್ ಇನ್ಸ್‌ಪೆಕ್ಟರ್ ಪರಮೇಶ್ವರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಬಾಲಾಜಿ ಬಾಬು, ನವೀನ್‌ಕುಮಾರ್, ಚೇತನ್‌ಕುಮಾರ್, ರವಿ ಸೇರಿದಂತೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement