ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಅಂಬೇಡ್ಕರ್ ಸಿದ್ಧಾಂತ ರೂಢಿಸಿಕೊಳ್ಳಿ'

Mainashree
Updated On : 8 Dec 2013, 11:25 am

ಕ.ಪ್ರ. ವಾರ್ತೆ  ಆನೇಕಲ್ಲು  ಡಿ. 8
ಮಾನವತಾವಾದಿ ಡಾ. ಅಂಬೇಡ್ಕರ್ ಅವರು ದೇಶ ಕಂಡ ಪ್ರತಿಭಾನ್ವಿತ ನಾಯಕ. ಅವರ ಅನುಯಾಯಿಗಳು ಪರಿನಿರ್ವಾಣ ದಿನದಂದು ಕನಿಷ್ಟ ಬಾಬಾ ಸಾಹೇಬರ ತತ್ವ ಸಿದ್ಧಾಂತಗಳ ಪೈಕಿ ಕೆಲವನ್ನಾದರೂ ಅನುಷ್ಠಾನ ಮಾಡಿಕೊಳ್ಳಬೇಕೆಂದು ಬಿಜೆಪಿ ಮುಖಂಡ ಮಧು ಕುಮಾರ್ ತಿಳಿಸಿದ್ದಾರೆ.
 ಅಂಬೇಡ್ಕರ್ ದೇಶದ ಸಂವಿಧಾನ ರಚನೆ ಮಾಡಿದರು. ದೇಶವಾಸಿಗಳ ಯೋಗಕ್ಷೇವು ಹಾಗೂ ಶೋಷಿತರ ದನಿ ಅವರ ಧ್ಯೇಯವಾಗಿತ್ತು. ನಮ್ಮ ಇಂದಿನ ನಾಯಕರು ಶೋಷಿತರ ನೋವು ನಿವಾರಣೆ, ಸಮಾನತೆಯ ಅನುಷ್ಠಾನ ಮಾಡುವಂತಹ ಧ್ಯೇಯ, ತತ್ವ ಸಿದ್ಧಾಂತಗಳ ಪೈಕಿ ಕೆಲವನ್ನಾದರೂ ಆಯ್ಕೆ ಮಾಡಿಕೊಂಡು ಜನಪರ ಯೋಜನೆಗಳ ಜಾರಿಗಾಗಿ ಪಣ ತೊಡಬೇಕೆಂದರು.
ಜಿಪಂ ಮಾಜಿ ಸದಸ್ಯ ಶ್ರೀರಾಮುಲು ತಮಟೆ ಬಾರಿಸುವ ಮುಲಕ ಚಾಲನೆ ನೀಡಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಪ್ರಾರಂಭದಿಂದಲೂ ದೀನ ದಲಿತರ ಕಲ್ಯಾಣಕ್ಕಾಗಿ ಅನೇಕ ಯಶಸ್ವಿ ಯೋಜನೆಗಳನ್ನು ಜಾರಿ ಮಾಡಿದೆ. 20 ಅಂಶಗಳ ಕಾರ್ಯಕ್ರಮ, ಇಂದಿರಾ ಆವಾಸ್ ಯೋಜನೆ ಮೂಲಕ ಸೂರು, ಉಳುವವನೇ ಭೂ ಒಡೆಯ, ಭೂ ದಾನ ಚಳವಳಿ ಮೂಲಕ ಸಮಾಜದ ಪ್ರಮುಖ ವಾಹಿನಿಗೆ ತರಲಾಗಿದೆ. ಗ್ರಾಮ ಅಭ್ಯುದಯದಲ್ಲಿ ಕಾಂಗ್ರೆಸ್ ನಿಲುವ ಅಚಲವಾಗಿದೆ ಎಂದರು.
ಆರಂಭ ಟ್ರಸ್ಟ್ ಸಂಯೋಜಕ ಕೆ. ನಾಗರಾಜ್ ಬಾಬಾ ಸಾಹೇಬ್ ಅವರ ಪರಿನಿರ್ವಾಣ ದಿನಾಚರಣೆಯಂದು ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಮಾನತೆಯ ಹಾದಿಯಲ್ಲಿ ಈ ದಿನದ ಮಹತ್ವವನ್ನು ತಿಳಿಸಲಾಯಿತು ಎಂದರು. ಬಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ ಮಧು ಪೂರ್ಣಿಮಾ ಹಾಗೂ ಸ್ಥಳೀಯ ಮುಖಂಡರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement