ಕಂಟನಕುಂಟೆಯಲ್ಲಿ ಪ್ರತಿಭಾ ಕಾರಂಜಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹೊರವಲಯದ ಕಂಟನಕುಂಟೆ ಗ್ರಾಮದಲ್ಲಿರುವ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ತೂಬಗೆರೆ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲೆಯ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ತೂಬಗೆರೆ ಕ್ಲಸ್ಟರ್ ಶಿಕ್ಷಣ ಸಂಯೋಜಕ ನೀಲಕಂಠ ಗಾವಂಕರ್ ಉದ್ಘಾಟಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಪ್ರಹ್ಲಾದ್, ಬಿಆರ್ಪಿ ಶ್ರೀಧರ್, ಸಿಆರ್ಪಿ ಸಂಜೀವರೆಡ್ಡಿ, ಮುನಿರಾಜು, ನರಸಿಂಹಮೂರ್ತಿ, ಶಿಕ್ಷಕ ರಾಜಣ್ಣ, ನಜೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು. ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭಾವಂತಿಕೆಯನ್ನು ಅನಾವರಣ ಮಾಡಿದರು.
ಇಂದಿನ ಸಿಎಂ ಜನತಾ ದರ್ಶನ ರದ್ದು
ಬೆಂಗಳೂರು: ಬಿಜಾಪುರ ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ಮಂಗಳ
ವಾರ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾದರ್ಶನ ಕಾರ್ಯಕ್ರ
ಮವನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆಯೇ ಸಿದ್ದರಾಮಯ್ಯ ಅವರು ಬಿಜಾಪುರಕ್ಕೆ ತೆರಳಲಿದ್ದಾರೆ. ಹೀಗಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಬೇಕಿದ್ದ ಜನತಾ ದರ್ಶನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.