ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಡಾ. ಅಂಬೇಡ್ಕರ್ ಮಹಾನ್ ಚೇತನ: ಆನೇಕಲ್ ಕೃಷ್ಣಪ್ಪ

Vishwanath S
Updated On : 10 Dec 2013, 12:35 pm

ಆನೇಕಲ್ಲು: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೇಧಾವಿ ವ್ಯಕ್ತಿಯಾಗಿದ್ದರು ಎಂದು ಪ್ರಜಾ ವಿಮೋಚನಾ ಚಳವಳಿಯ ಸಮಾನತಾವಾದ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದ್ದಾರೆ.
ಅವರು ಆನೇಕಲ್ ತಾಲೂಕು ಘಟಕ ಏರ್ಪಡಿಸಿದ್ದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿ ಮಾತನಾಡಿ ಸಂಘಟನೆ ಶಿಕ್ಷಣ, ಸಮಾನತೆ ಧ್ಯೇಯವನ್ನು ಹೊಂದಿದ್ದ ಅವರು ಕೇವಲ ಒಂದು ಜನಾಂಗದ ನಾಯಕರಲ್ಲ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿಗೆ ಮೀಸಲಿರುವ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸದೇ ಇದ್ದಲ್ಲಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿರುವುದಾಗಿ ತಿಳಿಸಿದ ಸಮಾಜ ಕಲ್ಯಾಣ ಸಚಿವರ ಕಾರ್ಯ ಶ್ಲಾಘನೀಯ ಎಂದರು
ಸಂತಾಪ: ವಿಶ್ವ ಕಂಡ ಮತ್ತೊಂದು ಮಹಾನ್ ಚೇತನ ಆಫ್ರಿಕಾ ನೆಲ್ಸನ್ ಮಂಡೇಲಾ ಅವರು ವಿಶ್ವ ಶಾಂತಿದೂತರಾಗಿ ಗುರುತಿಸಿಕೊಂಡಿದ್ದರು. ಅವರು ಸದಾ ಸ್ಮರಣೀಯರು ಎಂದು ಸಂತಾಪ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement