ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೂಲ ನಂಬಿಕೆ ಉಳಿಯಬೇಕು

Vishwanath S
Updated On : 10 Dec 2013, 12:35 pm

ಆನೇಕಲ್ಲು: ಸನಾತನ ಹಿಂದೂ ಧರ್ಮ ವೈಜ್ಞಾನಿಕ ತಳಹದಿಯ, ವೇದ ಶಾಸ್ತ್ರಗಳ ಭದ್ರ ಬುನಾದಿಯ ಸ್ಥಾವರವಾಗಿದೆ. ಇಲ್ಲಿನ ಮೂಲ ನಂಬಿಕೆಗಳು, ವಿಚಾರ ಧಾರೆಗಳ ಅಧ್ಯಯನ ಶೀಲ ಕೇಂದ್ರವಾಗಿದೆ. ಮೂಲ ನಂಬಿಕೆಗಳಿಗೆ ಧಕ್ಕೆಯಾಗದಂತೆ ಮೂಢ ನಂಬಿಕೆಗಳನ್ನು ತೊಳೆದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕಟಿ ಬದ್ಧರಾಗಬೇಕಿದೆ ಎಂದು ರಂಭಾಪುರಿ ಮಠದ ಪ್ರಸನ್ನ ರೇಣುಕ ಶ್ರೀಗಳು ಕರೆ ನೀಡಿದ್ದಾರೆ.
ಅವರು ತಾಲೂಕಿನ ರಾಜಾಪುರ ಸಂಸ್ಥಾನ ಮಠದಲ್ಲಿ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು  ವರ್ಧಂತಿ ಮಹೋತ್ಸವದಲ್ಲಿ ಅಶೀರ್ವಚ ನೀಡಿದರು.
ವಿಚಾರವಾದಿಗಳ ವಾದ ಸರಣಿಗೆ ವೇದಿಕೆ ಒದಗಬೇಕು. ಸರ್ಕಾರದ ಪ್ರತಿನಿಧಿಗಳು ಮೂಢ ನಂಬಿಕೆ ನಿಶೇಷ ಕಾಯಿದೆ ಜಾರಿಗೆ  ಮುನ್ನ ದೇಶದ ಸಂಸ್ಕೃತಿ, ಪರಂಪರೆ, ಸಂಸ್ಕಾರಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದರು.
ಹಿಮವತ್ ಕೇದಾರದ ಭೀಮಶಂಕರಲಿಂಗ್ ಸ್ವಾಮೀಜಿ ಮಾತನಾಡಿ ಎಲ್ಲ ಸಮುದಾಯಗಳ ಮುಖಂಡರು ಸಾಮರಸ್ಯ ಕಾಪಾಡುವ ಕೆಲಸದಲ್ಲಿ ನಿರತರಾಗಬೇಕೆಂದು ತಿಳಿ ಹೇಳಿದರು. ಸೂಕ್ಷ್ಮ ವಿಚಾರಗಳನ್ನು  ಚರ್ಚಿಸಬೇಕಾದಲ್ಲಿ ಪ್ರಬುದ್ಧತೆ ಹಾಗೂ ಪ್ರಾವೀಣ್ಯತೆ ಪ್ರಮುಖ ಪಾತ್ರವಹಿಸುತ್ತದೆ. ಸಮಾನ ಮನಸ್ಕರು ಸಮಾಜ ಮುಖಿ ಚಿಂತನೆಗಳನ್ನು ಹರಿಯಬಿಡಬೇಕಾದ ಸಂದರ್ಭದಲ್ಲಿ ಮಠಗಳ ಪಾವಿತ್ರ್ಯತೆಯನ್ನು ಅರಿತು ಹೇಳಿಕೆ ನೀಡಬೇಕೆಂದರು.
ಪ್ರಶಾಂತಿ ಕುಟೀರ ಯೋಗ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಚ್. ಆರ್. ನಾಗೇಂದ್ರ, ಯಡೆಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರ, ಬೆಳ್ಳಾವಿ, ನಾಗಲಾಪುರ ಶ್ರೀಗಳು ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಪೀಠೋತ್ಸವ ಸಮಾರಂಭಕ್ಕೆ ಶುಭ ಕೋರಿದರು. ವೀರಭದ್ರಸ್ವಾಮಿ ದೇಗುಲ ಟ್ರಸ್ಟ್ ಕೋವಾ ರೇವಣ್ಣ, ಬೆಂ.ನ.ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್. ಬಸವರಾಜು, ರಾಜಗೋಪಾಲರೆಡ್ಡಿ, ಜಯಣ್ಣ ರಾಜಾಪುರ ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement