ಸ್ವಾಭಿಮಾನದ ಸಂಕೇತ ಸ್ವಾಮಿ ವಿವೇಕಾನಂದ
ಮಾಗಡಿ: ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತ್ಯಾಗೀಶ್ವರಾನಂದಜೀ ಮಹಾರಾಜ್ ಕರೆ ನೀಡಿದರು.
ಅವರು ಸ್ವಾಮಿ ವಿವೇಕಾನಂದರ 150 ನೇ ಜನ್ಮದಿಚಾರಣೆ ಪ್ರಯುಕ್ತ ಏರ್ಪಡಿಸಿರುವ ರಥಯಾತ್ರೆಯ ಸಾನಿಧ್ಯ ವಹಿಸಿ ಮಾತನಾಡಿ ಸ್ವಾಭಿಮಾನದ ಸಂಕೇತ ಸ್ವಾಮಿ ವಿವೇಕಾನಂದರು. ಹೇಡಿತನ ಬಿಟ್ಟು, ಶಕ್ತಿಯುತ ಜೀವನವನ್ನು ನಡೆಸುವಂತೆ ಯುವಜತನಗೆ ವಿವೇಕಾನಂದರು ಶಕ್ತಿ ತುಂಬಿದ್ದಾರೆ ಎಂದರು.
ಪೋಲೋಹಳ್ಳಿಯ ಭವತಾರಿಣಿ ಆಶ್ರಮದ ಮಾತಾ ವಿವೇಕಾಮಯಿ ಮಾತನಾಡಿ ಇಂದಿನ ಯುವಶಕ್ತಿ ಮೊದಲು ಅಕ್ಷರಸ್ಥರಾಗಬೇಕು. ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ನನ್ನ ದೇಶ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕು. ದೇಶಪ್ರೇಮ, ದೇಶಭಕ್ತಿ ಬೆಳೆಸಿಕೊಂಡು ಆದರ್ಶಪ್ರಾಯರಾಗುವಂತೆ ಮಹಾಕಾವ್ಯಾನಂದಜೀ ಮಹಾರಾಜ್ ವಿವರಿಸಿದರು.
ಭವ್ಯ ಸ್ವಾಗತ: ರಾಮನಗರಿದಿಂದ ಆಗಮಿಸಿದ ಸ್ವಾಮಿವಿವೇಕಾನಂದರ ರಥಯಾತ್ರೆಯನ್ನು ಹೊಸಪೇಟೆ ವೃತ್ತದಲ್ಲಿ ಭವತಾರಿಣಿ ಆಶ್ರಮದ ಮತಾ ವಿವೇಕಾಮಯಿ ನೇತೃತ್ವದಲ್ಲಿ ವಿವೇಕಾನಂದರ ಪ್ರತಿಮೆಗೆ ಹಾರ ಹಾಕಿ ಭವ್ಯವಾಗಿ ಸ್ವಾಗತಿಸಿದರು. ನಂತರ ತಿರುಮಲೆ, ಎನ್.ಇ.ಎಸ್. ವೃತ್ತ, ಕೆಂಪೇಗೌಡ ವೃತ್ತ, ಬಸವೇಶ್ವರ ವೃತ್ತದಿಂದ ಕೆಂಪೇಗೌಡ ಪ್ರತಿಮೆ ಬಳಿ ಸೇರಿತು. ಪಟ್ಟಣದ ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳು ಬಿಜೆಪಿ ಮುಖಂಡರು, ಯುವಕರು, ಅಭಿಮಾನಿಗಳು, ವಿವಿಧ ಜನಪರ, ಕನ್ನಡಪರ ಸಂಘಟನೆಗಳು ಭಾಗವಹಿಸಿದ್ದವು. ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಗುರುವಿಂಗಯ್ಯ, ಕೆಪಿಸಿಸಿ ಸದಸ್ಯ ಎ.ಮಂಜು ಸೇರಿದಂತೆ ನೂರಾರು ಗಣ್ಯರು ವಿವೇಕಾನಂದರ ಪ್ರತಿಮೆಗೆ ಹಾರ ಹಾಕಿದರು. ನಂತರ ಕಲ್ಯಗೇಟ್ ವೃತ್ತದವರೆವಿಗೂ ಸಾಗಿದ ಬೃಹತ್ ರಥಯಾತ್ರೆಯು ಸಿದ್ಧಾರೂಢಾಶ್ರಮದ ಬಳಿ ಸೇರಿತು. ನಂತರ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರಥಯಾತ್ರೆಯ ಉದ್ದೇಶವನ್ನು ಕುರಿತು ಸಾರ್ವಜನಿಕ ಸಭೆ ನಡೆಯಿತು.