ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಅಂಬೇಡ್ಕರ್ ಒಂದು ವರ್ಗಕ್ಕೆ ಮಾತ್ರ ಸೀಮಿತರಾದವರಲ್ಲ'

Vishwanath S
Updated On : 14 Dec 2013, 12:30 pm

ಚನ್ನಪಟ್ಟಣ: ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮೀಸಲಾಗದೆ ಸಮಾಜದ ಎಲ್ಲಾ ನೊಂದ ವರ್ಗದವರಿಗೂ ನ್ಯಾಯ ದೊರಕಿಸಿ ಕೊಡಬೇಕೆಂದು ಹೋರಾಡಿದ ಮಹಾನ್ ಮಹಾನ್ ಮಾನವತಾ ವಾದಿ ಎಂದು ವಿಚಾರವಾದಿ ಜಯಸೇನ ಅಭಿಪ್ರಾಯ ಪಟ್ಟರು.
ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಮ್ಮಿಕೊಂಡಿದ್ದ ಅಂಬೇಡ್ಕರ್  ಮಹಾಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮಾನವೀಯ ನೆಲೆಗಟ್ಟಿನ ಸಮಾಜ ನಿರ್ಮಾಣ ಮಾಡಬೇಕೆಂದು ತಮ್ಮ ಜೀವನವನ್ನೇ ಪಣವಾಗಿಟ್ಟು ಹೋರಾಡಿದ ಅಂಬೇಡ್ಕರ್ ಈ ದೇಶ ಕಂಡ ಸರ್ವಶ್ರೇಷ್ಠನಾಯಕ ಎಂದು ಬಣ್ಣಿಸಿದರು.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಕಾನೂನಾತ್ಮಕವಾಗಿ ಜಾರಿಗೆ ತರಲು ಅಂಬೇಡ್ಕರ್‌ಪಟ್ಟ ಪರಿಶ್ರಮ ಮಹತ್ತರವಾದುದು. ಪಟ್ಟಭದ್ರರ ಹಿಡಿತದಲ್ಲಿದ್ದ ಸಮಾಜದಲ್ಲಿ ಶೋಷಿತ ಸಮುದಾಯಕ್ಕೆ ಕಾನೂನಾತ್ಮಕ ಹಕ್ಕನ್ನು ನೀಡಿ ಇತರ ಮನುಜರಂತೆ ನಾವು ಸಮಾನರು ಎಂದು ಬದುಕುವ ಅವಕಾಶವನ್ನು ಜಾರಿಗೆ ತಂದ ಮಹನೀಯ ಅಂಬೇಡ್ಕರ್ ಎಂದರು.
ಬೌದ್ಧ ಧರ್ಮದ ತತ್ವ ಮತ್ತು ಅದರಲ್ಲಿನ ಸಮಾನತೆ, ಬ್ರಾತೃತ್ವ ಸೇರಿದಂತೆ ಭಗವಾನ್ ಬುದ್ಧನ ವಿಚಾರಗಳನ್ನ ಮೆಚ್ಚಿ ಅಂಬೇಡ್ಕರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಬೌದ್ಧಮತಕ್ಕೆ ಪರಿವರ್ತನೆಗೊಂಡ ಪುಣ್ಯ ದಿನ ಇದಾಗಿದ್ದು ಪ್ರತಿಯೊಬ್ಬ ಶೋಷಿತನೂ ಸನಾತನ ಧರ್ಮದ ಸಂಕೋಲೆಯಿಂದ ಹೊರಬರದಿದ್ದರೆ ಯಾವುದೇ ಕಾರಣಕ್ಕೂ ನಮ್ಮ ಉದ್ಧಾರ ಸಾಧ್ಯವಾಗುವುದಿಲ್ಲ ಎಂದರು.
 ಅಪ್ಪಗೆರೆ ಗ್ರಾ.ಪಂ ಸದಸ್ಯೆ ಡಿ.ಕುಮಾರಿ, ಗ್ರಾಮದ ಮುಖಂಡರಾದ ಮುನಿಯಪ್ಪ, ವೆಂಕಟೇಶ್, ವೆಂಕಟಾಚಲ, ಗ್ರಾ.ಪಂ ಮಾಜಿ ಸದಸ್ಯ ವೆಂಕಟರಾಮು, ಬಹುಜನ ವಿದ್ಯಾರ್ಥಿಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ.ಡಿ,ಪ್ರದೀಪ್ ಕುಮಾರ್, ನಾರಾಯಣ ಕುಮಾರ್, ನವೀನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement