ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಇಂದು ವಿವಿಧೆಡೆ ಹನುಮ ಜಯಂತಿ

Vishwanath S
Updated On : 14 Dec 2013, 12:30 pm

ದೊಡ್ಡಬಳ್ಳಾಪುರ: ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಶನಿವಾರ ನಡೆಯಲಿದೆ. ಬೆಳಗ್ಗೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ಸ್ವಾಮಿಗೆ ಬೆಳ್ಳಿ ಅಲಂಕಾರ ಮಾಡಲಾಗುವುದು. ಬೆಳಗ್ಗೆ 10.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶುಕವಾಹನ ಆಂಜನೇಯಸ್ವಾಮಿ ಉತ್ಸವ ನಡೆಯಲಿದೆ. ಸಂಜೆ ಪುತ್ತೂರು ನರಸಿಂಹನಾಯಕ್ ಅವರಿಂದ ಭಕ್ತಿ ಸಂಗೀತ ಆಯೋಜಿಸಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಟಾಗಿವೆ.
ರಾಜಘಟ್ಟ ರಥೋತ್ಸವ: ಹನುಮ ಜಯಂತಿ ಅಂಗವಾಗಿ ತಾಲೂಕಿನ ಸುಪ್ರಸಿದ್ಧ  ರಾಜಘಟ್ಟ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ನಡೆಯಲಿದೆ. ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾಲಂಕಾರಗಳು ನಡೆಯಲಿದ್ದು, ದಿನವಿಡೀ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಟಾಗಿವೆ.
ಬನ್ನಿಮಂಗಲದಲ್ಲಿ ವಿಶೇಷ: ಸಮೀಪದ ಬನ್ನಿಮಂಗಲ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಾಲಯ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಹನುಮ ಜಯಂತಿ ಉತ್ಸವ ಮತ್ತು ವಿನಾಯಕ ಹೋಮ, ಸಮಿತಿಯ 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಶನಿವಾರ ಬೆಳ್ಳಿ ವಜ್ರಾಂಗಿ ಅಲಂಕಾರ ಮಾಡಲಾಗುವುದು. ದೇವಾಲಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವ, ಪ್ರಾಕಾರೋತ್ಸವ, ರಾಜಬೀದಿ ಉತ್ಸವ ನಡೆಯಲಿದೆ.
ವಿವಿಧ ದೇವಾಲಯಗಳಲ್ಲಿ: ನಗರದ ರೋಜಿಪುರ ಆಂಜನೇಯ ದೇವಾಲಯ, ಅರಳುಮಲ್ಲಿಗೆ ವೃತ್ತದ ಆಂಜನೇಯಸ್ವಾಮಿ ದೇವಾಲಯ, ರಾಮಣ್ಣ ಬಾವಿ ಆಂಜನೇಯದೇಗುಲ, ಶಿವಪುರ ಬಾಗಿಲು ಆಂಜನೇಯ ದೇಗುಲ, ತಾಲೂಕಿನ ಮೆಳೇಕೋಟೆ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ದೊಡ್‌ಡಬೆಳವಂಗಲ, ತೂಬಗೆರೆ, ಸಾಸಲು, ಆರೂಡಿ ಹೋಬಳಿಗಳ ಅನೇಕ ದೇವಾಲಯಗಳು, ತಪಸೀಹಳ್ಳಿಯ ಹನುಮ ದೇವಾಲಯ, ಲಿಂಗನಹಳ್ಳಿಯ ಕಂಬದ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ವಿಶೇಷ ಕಾರ್ಯಕ್ರಮ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement