ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಾಶ್ವತ ನೀರಾವರಿ ಜಾರಿಗೆ ಬದ್ಧವಾಗಿರಲಿ

Vishwanath S
Updated On : 14 Dec 2013, 12:29 pm

ದೇವನಹಳ್ಳಿ: ಬಯಲು ಸೀಮೆ ಜಿಲ್ಲೆಗಳ ರೈತರ ಬಹುಕಾಲ ಬೇಡಿಕೆಯಂತೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವಲ್ಲಿ ಜನರನ್ನು ಸರ್ಕಾರಗಳು ದಾರಿ ತಪ್ಪಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಕೇಪೇಗೌಡ ಒಕ್ಕಲಿಗರ ಭವನ ಉದ್ಘಾಟನಾ ಸಮಾರಂಭಲ್ಲಿ  ಭಾಗವಹಿಸಿ ಅವರು ಮಾತನಾಡಿದರು.  ನಿರ್ಮಲಾನಂಧನಾಥ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿಯವರು ಸಮಾಜಕ್ಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಅವರ ಮಾರ್ಗದರ್ಶನವನ್ನು ಎಲ್ಲ ಪ್ರಜಾಪ್ರತಿನಿಧಿಗಳು ಪಡೆದರೆ ಸಮಾಜ ಉತ್ತಮವಾಗಿ ಕಟ್ಟಬಹುದಾಗಿದೆ ಎಂದು ಕುಮಾರಸ್ವಾಮಿ ವಿಶ್ಲೇಸಿಸಿದರು.
ಸರ್ಕಾರದ ಎತ್ತಿನಹೊಳೆ ಯೋಜನೆಯ ವರದಿಯಂತೆ  ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 6, ದೇವನಹಳ್ಳಿ 1, ತಿಪ್ಪಗೊಂಡನಹಳ್ಳಿಗೆ 1 ಹಾಗೂ ಹೆಸರುಘಟ್ಟಕ್ಕೆ 0.9 ಟಿಎಂಸಿ ನೀರು ನೀಡುವ ಸುಳ್ಳು ಭರವಸೆ ನೀಡಿ ಸರ್ಕಾರದಲ್ಲಿ ಬದ್ಧತೆ  ಇಲ್ಲದಂತಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.  
ಬೆಂಬಲ ಬೆಲೆ ನೀಡಲಿ: ಈ ಭಾಗದ ದ್ರಾಕ್ಷಿ ಬೆಳೆಗಾರರಿರಬಹುದು. ಅಲ್ಲದೆ ಇತರ ಬೆಳೆ ಬೆಳೆಯುವ ರೈತರಿಗಾಗಿ ಮೂರು ಸಾವಿರ ಕೋಟಿ ರುಪಾಯಿ ಮೀಸಲಿಟ್ಟು ಬೆಂಬಲ ಬೆಲೆ ನೀಡಬೇಕೆಂದು ಸರ್ಕಾರದಲ್ಲಿ ಚರ್ಚೆ ಮಾಡಿದ್ದೇನೆ ಈ ರೀತಿ ಬೆಂಬಲ ಬೆಲೆ ನೀಡಿದ್ದೇ ಆದರೆ ಸಾಕಷ್ಟು ರೈತರ ಆತ್ಮಹತ್ಯೆಗಳನ್ನು ತಡೆಯಬಹುದಾಗಿತ್ತು ಎಂದು ಕುಮಾರಸ್ವಾಮಿ ತಿಳಿಸಿದರು.
ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಲ್ಲಿನ ಒಕ್ಕಲಿಗರ ಸಂಘದ ಕಾರ್ಯವನ್ನು ಅಭಿನಂದಿಸಿದರಲ್ಲದೆ ಇತರ ಜನಾಂಗದವರಲ್ಲಿ ಏನೇ ಸಮ್ಯೆಗಳಿದ್ದರೂ ತಮ್ಮ ತಮ್ಮಲ್ಲೇ ಬಗೆಹರಿಸುಕೊಳ್ಳುತ್ತಾರೆ ಆದರೆ ಒಕ್ಕಲಿಗ ಸಮಾಜ ರಾಜ್ಯ ಸಂಘದ ಚುನಾವಣೆ ಹೆಸರಿನಲ್ಲಿ ಒಳಪಂಗಡಗಳ ಒಡೆಯುವುದು ಸರಿಯಲ್ಲ ಎಂದು ಮಾರ್ಮಿಕವಾಗಿ ತಿಳಿಸಿದರು.
ಪಟ್ಟನಾಯಕಲಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ   ಮಾತನಾಡಿ, ಅಸ್ಪೃಷ್ಯರನ್ನು ದೇವಾಲದ ಗರ್ಭಗುಡಿಗೆ ಬಿಟ್ಟವರು ಬಾಲಗಂಗಾಧರನಾಥ ಸ್ವಾಮೀಜಿ. ಅವರು ಬಸವಣ್ಣನವರ ಕನಸು ನನಸು ಮಾಡಿದ ಸ್ವಾಮೀಜಿ ಎಂದರಲ್ಲದೆ ಒಕ್ಕಲಿಗ ಜನಾಂಗದವರಿಗೆ ಅವರಲ್ಲಿನ ಶಕ್ತಿಯ ಅರಿವಿನ ಕೊರತೆ ಇದೆ. ಎಲ್ಲ ರೀತಿಯ ಪ್ರಜ್ಞಾವಂತತೆ ಬೆಳಸಿಕೊಳ್ಳಬೇಕು ಮತ್ತು ಒಳಪಂಗಡಗಳನ್ನು ಒಂದು ಗೂಡಿಸುವ ಕೆಲಸ ಆಗಬೇಕು ಎಂದರು.
ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ನಿವೇಶನ ದಾನಿಗಳಾದ ಬಿ.ಮುನೇಗೌಡ ಮತ್ತಿತರ ಸಹಕಾರವನ್ನು ಸ್ವಾಮೀಜಿ ನೆನೆದರು. ಕೆ.ಸಿ.ವೆಂಕಟೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.  ರಾಜ್ಯ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಬಿಜೆಪಿ ಮುಖಂಡ ಎಂ.ನಾರಾಯಣಗೌಡ, ಚಿಕ್ಕಬಳ್ಳಾಪುರದ ಮುಖಂಡ ಆಂಜನೇಯರೆಡ್ಡಿ, ಮುನಿಶಾಮಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement