ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸರ್ದಾರ್ ಪಟೇಲ್ ಪ್ರತಿಮೆ ಪ್ರತಿಷ್ಠಾಪನೆಗಾಗಿ ಬಿಜೆಪಿ ಏಕತಾ ಓಟ

Vishwanath S
Updated On : 14 Dec 2013, 12:31 pm

ದೇವನಹಳ್ಳಿ: ಭಾರತದ ಉಕ್ಕಿನ ಮನುಷ್ಯ  ಸರ್ದಾರ್ ವಲ್ಲಭ ಬಾಯ್ ಪಟೇಲ್ ಏಕತಾ ಪ್ರತಿಮೆ ನಿರ್ಮಾಣಕ್ಕಾಗಿ ಏಕತಾ ಓಟವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಡಿ.15ರಂದು ಬಿಜೆಪಿ ಜಿಲ್ಲಾಧ್ಯಕ್ಷ ವಿ.ಸಿ.ನಾರಾಯಣಸ್ವಾಮಿ ಆಯೋಜಿಸಿದ್ದು, ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ ತಿಳಿಸಿದರು.  ಏಕತಾ ಪ್ರತಿಮೆಗಾಗಿ ಏಕತಾ ಒಟದಲ್ಲಿ ಭಾಗವಹಿಸಲು ದೇವನಹಳ್ಳಿ ತಾಲೂಕಿನಿಂದ ಆರುನೂರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದರು.  ಪಟೇಲರ ಏಕತಾ ಪ್ರತಿಮೆ ಪ್ರತಿಷ್ಠಾಪನೆ ಅಂಗವಾಗಿ ಮನೆ-ಮನೆಗಳಲ್ಲಿ ಪಟೇಲರ ಬದುಕು ಮತ್ತು ಸಾಧನೆಗಳ ಬಗ್ಗೆ ಪ್ರಚಾರ, ಅತಿ ಹೆಚ್ಚು ಜನರಿಂದ ಸಹಿ ಸಂಗ್ರಹ, ಪ್ರತಿ ಹಳ್ಳಿಯಿಂದಲೂ ರೈತರು ಉಪಯೋಗಿಸಿದ ಕಬ್ಬಿಣದ ಪರಿಕರಗಳು ಅಲ್ಲದೆ ಎಲ್ಲ ಪ್ರಮುಖ ಐತಿಹಾಸಿಕ ಗ್ರಾಮಗಳ ಸ್ಥಳದ ಮಣ್ಣನ್ನು ಸಹ ಸಂಗ್ರಹಿಸಿಲಾಗುವುದು ಎಂದು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸೊಣ್ಣೇಗೌಡ ಹಾಗೂ ಬೂದಿಗೆರೆ ಪ್ರಭಾಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement