ಆಂಜನೇಯಸ್ವಾಮಿ ದೇಗುಲದಲ್ಲಿ ಹನುಮ ಜಯಂತಿ
ಮಾಗಡಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ಕಲ್ಲೂರು ಶ್ರೀ ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಮುಂಜಾನೆ ದೇವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಬೆಣ್ಣೆ, ಹೂವಿನ ಅಲಂಕಾರ ಮಾಡಲಾಗಿತ್ತು. ಭಜನೆ ತಂಡದವರಿಂದ ರಾಮಭಜನೆ ಕೀರ್ತನೆಗಳನ್ನು ಹಾಡಿದರು. ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯದೊಂದಿಗೆ ಆಂಜನೇಯಸ್ವಾಮಿ ಉತ್ಸವ ನಡೆಯಿತು. ಹನುಮ ಜಯಂತಿ ಪ್ರಯುಕ್ತ ಸಹಸ್ರಾರು ಭಕ್ತರು ಭಾಗವಹಿಸಿದ್ದು, ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅವಿರತವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಗಣ್ಯರು, ಚುನಾಯಿತ ಪ್ರತಿನಿಧಿಗಳು, ದಾನಿಗಳು ಭಕ್ತರು ಭಾಗವಹಿಸಿದ್ದರು. ಪಟ್ಟಣದ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿನ ಪುರಾತನ ಆಂಜನೇಯಸ್ವಾಮಿ, ಹೊಸಪೇಟೆ ಸೀತಾರಾಮ ಲಕ್ಷ್ಮಣ, ಆಂಜನೇಯಸ್ವಾಮಿ ದೇವಾಲಯದಲ್ಲಿಯೂ ಅದ್ಧೂರಿ ಹನುಮ ಜಯಂತಿ ಪೂಜೆ ನೆರವೇರಿತು. ಕರ್ಣೀಕರ ಕಲ್ಯಾಣಿ ಬಳಿ ಇರುವ ಪುರಾತನ ಆಂಜನೇಯ, ಬಂಗ್ಲೆ ಆಂಜನೇಯ, ಬಿಲ್ವಪತ್ರೆ ಆಂಜನೇಯ, ಬಂಡೆ ಆಂಜನೇಯಸ್ವಾಮಿ, ತಿರುಮಲೆ ಸಹ್ಯಾದ್ರಿ ಆಂಜನೇಯ, ಕುದೂರು, ತಿಪ್ಪಸಂದ್ರ, ಮಾಡಬಾಳ್, ಸಾತನೂರು, ಆಗಲಕೋಟೆ, ಮರಲಗೊಂಡಲ, ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಕಾರ್ಯಕ್ರಮ ಜರುಗಿದವು.