ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕುಡಿಯುವ ನೀರು ಶುದ್ಧೀಕರಣ ಘಟಕ ಶಂಕುಸ್ಥಾಪನೆ ಇಂದು

Vishwanath S
Updated On : 15 Dec 2013, 1:32 am

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮತ್ತು ನವದೆಹಲಿಯ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾ.ಪಂ ಹಲವು ಗ್ರಾಮಗಳು,  ಬಾಶೆಟ್ಟಿಹಳ್ಳಿ ಪಂಚಾಯಿತಿಯ ಜವಾಹರ ನವೋದಯ ವಿದ್ಯಾಲಯ ಮತ್ತು ಹುಲಿಕುಂಟೆ ಪಂಚಾಯಿತಿಯ ಹುಲಿಕುಂಟೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳ ಶಂಕುಸ್ಥಾಪನಾ ಸಮಾರಂಭ ಡಿ.15ರ ಭಾನುವಾರ ಸಂಜೆ 5 ಗಂಟೆಗೆ ಚಿಕ್ಕತುಮಕೂರಿನಲ್ಲಿ ನಡೆಯಲಿದೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದು, ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣಬೈರೇಗೌಡ, ಜಿ.ಪಂ ಅಧ್ಯಕ್ಷ ನಾರಾಯಣಸ್ವಾಮಿ, ಎಂಎಲ್‌ಸಿ ರಾಮಚಂದ್ರಗೌಡ, ಪುಟ್ಟಣ್ಣ, ಇ.ಕೃಷ್ಣಪ್ಪ, ಜಿಲ್ಲಾಧಿಕಾರಿ ವಿ.ಶಂಕರ್, ಜಿ.ಪಂ ಉಪಾಧ್ಯಕ್ಷ ಎನ್. ಹನುಮಂತೇಗೌಡ, ತಾ.ಪಂ ಅಧ್ಯಕ್ಷೆ ನರಸಮ್ಮ ಮತ್ತಿತರರು ಭಾಗವಹಿಸಲಿದ್ದಾರೆ.
ಮದುವೆ ನಿಶ್ಚಯವಾಗಿದ್ದ ವರ ನಾಪತ್ತೆ
ನೆಲಮಂಗಲ:  ಮದುವೆ ನಿಶ್ಚಯವಾಗಿದ್ದ ವರನೋರ್ವ ಕಾಣೆಯಾಗಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ  ಶನಿವಾರ ದೂರು ದಾಖಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಬಾಲಾಜಿ ತಿಳಿಸಿದ್ದಾರೆ. ಪಟ್ಟಣದ ಹಿಪ್ಪೆ ಆಂಜನೇಯಸ್ವಾಮಿ ಬಡಾವಣೆ ವಾಸಿಯಾಗಿದ್ದ ಹನುಮಂತರಾಜು ಅವರ ಮಗನಾದ ನವೀನ್ ಕುಮಾರ್ (28) ಕಾಣೆಯಾಗಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.  ಈತನಿಗೆ ತುಮಕೂರು ಟೌನ್‌ನ ವಧುವಿನೊಂದಿಗೆ ಡಿಸೆಂಬರ್ 14 ಮತ್ತು 15 ರಂದು ಮದುವೆ ಏರ್ಪಾಟಾಗಿತ್ತು. ಈತ ಬೆಂಗಳೂರಿನ ಮಾರ್ಕೆಟ್‌ಗೆ ಹೋಗಿ ಬರುತ್ತೇನೆಂದು ಶುಕ್ರವಾರ ಮನೆಯಿಂದ ಹೋದವನು ರಾತ್ರಿಯಾದರು ವಾಪಸು ಮನೆಗೆ ಬಂದಿಲ್ಲ ಎಂದು ಈತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈತನ ಚಹರೆ ಎತ್ತರ 5.6 ಅಡಿ ಎತ್ತರವಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಎರಡು ಕಿವಿಯ ಹಿಂಭಾಗದಲ್ಲಿ ಕಪ್ಪದಾದ 2 ಮಚ್ಚೆಗಳು ಇವೆ. ಮನೆಯಿಂದ ಹೋಗುವಾಗ ತುಂಬು ತೋಳಿನ ಶರ್ಟ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಮಾತನಾಡುತ್ತಾರೆ. ಈತನ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸ್‌ಠಾಣೆ ದೂರವಾಣಿ ಸಂಖ್ಯೆ 080-27722133, 9945738545ರ ಸಂಪರ್ಕಿಸಲು ತಿಳಿಸಿದ್ದಾರೆ.
ವ್ಯಕ್ತಿ ನಾಪತ್ತೆ, ದೂರು ದಾಖಲು
ನೆಲಮಂಗಲ: ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿಯೋರ್ವ ಕಾಣೆಯಾಗಿರುವ ಘಟನೆ ಬಗ್ಗೆ ತ್ಯಾಮಗೊಂಡ್ಲು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾಣೆಯಾದ ವ್ಯಕ್ತಿಯನ್ನು ಡಿ.ಪಿ. ಮುನಿರಾಜು (62) ಎಂದು ತಿಳಿಸಿದ್ದಾರೆ. ಈತನ ಚಹರೆ 5.4 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಗುಂಡುಮುಖ, ಗುಂಗುರು ಕೂದಲು ಹೊಂದಿದ್ದು, ಕನ್ನಡ, ಉರ್ದು, ತಮಿಳು ಮಾತನಾಡುತ್ತಾನೆ. ಹಸಿರು ನೀಲಿ ಬಣ್ಣದ ಶರ್ಟ್ ಕಪ್ಪು ಪ್ಯಾಂಟ್ ಧರಿಸಿದ್ದಾರೆ. ಈತನ ಬಗ್ಗೆ ಸುಳಿವು ದೊರೆತಲ್ಲಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 27732033, 9480802463 ಸಂಪರ್ಕಿಸಲು ತಿಳಿಸಿದ್ದಾರೆ.
ಅಕ್ರಮ ಬಡಾವಣೆ ನಿರ್ಮಾಣ ತಡೆಗೆ ಪಿವಿಸಿ ಆಗ್ರಹ
ಆನೇಕಲ್: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಕೂಡಲೆ ಇದಕ್ಕೆ ಕಡಿವಾಣ ಹಾಕಬೇಕೆಂದು ಪ್ರಜಾ ವಿಮೋಚನಾ ಚಳವಳಿ ಸಮತಾವಾದ ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಒತ್ತಾಯಿಸಿದ್ದಾರೆ.  ಅವರು ತಾಲೂಕಿನ ಹುಲಿಮಂಗಲ ಗ್ರಾ.ಪಂ. ಮುಂಭಾಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂದು ಮಾತನಾಡಿ ಹಸಿರು ವಲಯದಲ್ಲಿದ್ದರೂ ಜಮೀನುಗಳನ್ನು ಪರಿವರ್ತನೆ ಮಾಡಲಾಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement