ಸೂಲಿಬೆಲೆ ಸುತ್ತಮುತ್ತ ಹನುಮ ಜಪ...
ಸೂಲಿಬೆಲೆ: ಸೂಲಿಬೆಲೆ ಪಟ್ಟಣ ಸೇರಿದಂತೆ ಹೋಬಳಿಯ ನಾನಾ ಕಡೆ ಶನಿವಾರ ಅದ್ಧೂರಿಯಾಗಿ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು. ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿರುವ ಹನುಮಂತನ ವಿಗ್ರಹಕ್ಕೆ ಜಯಂತಿ ಪ್ರಯುಕ್ತ ಮಾಡಿದ ಹೂವಿನ ಅಲಂಕಾರ ಭಕ್ತರ ಗಮನ ಸೆಳೆದಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸೂಲಿಬೆಲೆ ಹೋಬಳಿಯ ಹಸಿಗಾಳ ಗ್ರಾಮದಲ್ಲಿರುವ ರಾಮಾಂಜನೇಯಸ್ವಾಮಿ ದೇಗುಲ ಆಂಜನೇಯಸ್ವಾಮಿ ವಿಗ್ರಹ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲ್ಲಿನ ಗ್ರಾಮದ ಭಕ್ತರು ದೇವರ ದರ್ಶನ ಪಡೆದರು. ಎಂ.ಸತ್ಯವಾರ ಗ್ರಾಮದಲ್ಲಿರುವ ಆಂಜನೇಯಸ್ವಾಮಿ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿದ್ದು, ಭಕ್ತರ ಗಮನಸೆಳೆಯಿತು.