ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹನುಮಾನ್ ಜಯಂತಿ ಪ್ರಯುಕ್ತ ವಿಶೇಷ ಪೂಜೆ

Vishwanath S
Updated On : 15 Dec 2013, 1:31 am

ನೆಲಮಂಗಲ: ಶ್ರೀರಾಮನ  ಪರಮ ಭಕ್ತ ಹನುಮಾನ್ ಜಯಂತಿ ಪ್ರಯುಕ್ತ ಪಟ್ಟಣ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಸ್ವಾಮಿಗೆ ವಿಶೇಷವಾಗಿ ಅಲಂಕರಿಸಿ ಸಹಸ್ರಾರು ಭಕ್ತಾದಿಗಳು  ಪೂಜೆ ನೆರವೇರಿಸಿದರು. ಪಟ್ಟಣದ ಸುಭಾಷ್ ನಗರದ ತಿಮ್ಮಶೆಟ್ಟಿ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ಪ್ರಸನ್ನ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಹನುಮ ಜಯಂತಿ ಪೂಜಾ ಮಹೋತ್ಸವದಲ್ಲಿ ವೀರಾಂಜನೇಯಸ್ವಾಮಿ ದೇವಾಲಯವು ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರಗೊಂಡಿತ್ತು. ಸ್ವಾಮಿಗೆ ಅಭಿಷೇಕ, ಕುಂಕುಮಾರ್ಚನೆ, ಸಹಸ್ರನಾಮಾರ್ಚನೆ ಹಾಗೂ ಹೋಮಾದಿಗಳು ನಡೆಸಿ ವಿಶೇಷವಾಗಿ  ಬೆಳ್ಳಿ ವಜ್ರಾಂಗಿ ಅಲಂಕಾರದೊಂದಿಗೆ ಸ್ವಾಮಿಗೆ ಮಹಾಮಂಗಳಾರತಿ  ನೆರವೇರಿಸಿದರು. ಹನುಮ ಜಯಂತಿ ಅಂಗವಾಗಿ ಸಾವಿರಾರು ಜನ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.  ತಾಲ್ಲೂಕಿನ ಗೊಲ್ಲಹಳ್ಳಿ, ಅರಿಶಿನಕುಂಟೆ ಹಾಗೂ  ಪಟ್ಟಣದ ಅಡೇಪೇಟೆಯ ಹಿಪ್ಪೆ ಆಂಜನೇಯ ಸ್ವಾಮಿ, ರಾಮಮಂದಿರ, ವಾಸವಿ ಕಲ್ಯಾಣ ಮಂಟಪ ರಸ್ತೆ, ಮಾರ್ಕೆಟ್ ಚೌಕದ ಬಳಿ ಪೇಟೆ ಆಂಜನೇಯ ಸ್ವಾಮಿ ದೇವಾಲಯ, ಬಸ್ ನಿಲ್ದಾಣ,  ಕುಣಿಗಲ್ ಬೈಪಾಸ್, ತಿಮ್ಮಶಿಟ್ಟಪ್ಪ ಬಡಾವಣೆ ಆಂಜನೇಯ ದೇವಸ್ಥಾನ, ಸೊಂಡೆಕೊಪ್ಪ ಆಟೋ ನಿಲ್ದಾಣ ಹಾಗೂ ಪಟ್ಟಣದ ಅನೇಕ ಕಡೆ ಹನುಮ ಜಯಂತು ಆಚರಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement