ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಎಸ್‌ಬಿಎಂ ಶಾಖೆ ದಾಖಲೆ ವಹಿವಾಟು

Vishwanath S
Updated On : 17 Dec 2013, 12:45 pm

ಚನ್ನಪಟ್ಟಣ: ಪ್ರಸಕ್ತ ವರ್ಷದಲ್ಲಿ ಇಲ್ಲಿನ ಎಸ್‌ಬಿಎಂ ಶಾಖೆ 150ಕೋಟಿ ರೂ. ವಹಿವಾಟು ಮುಗಿಸುವ ಮೂಲಕ ದಾಖಲೆ ಮಾಡಿದೆ ಎಂದು ಎಸ್‌ಬಿಎಂ ಬೆಂಗಳೂರು ವಲಯ-2ರ ಉಪ ಮಹಾಪ್ರಬಂಧಕರಾದ ವಿಜಯಲಕ್ಷ್ಮೀ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ಎಸ್‌ಬಿಎಂ ಶಾಖಾ ಕಚೇರಿಯ ಶತಮಾನೋತ್ಸವ ಸಮಾರಂಭಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಈ ಭಾಗದ ವಿಶ್ವಾಸಾರ್ಹ ಬ್ಯಾಂಕ್ ಎನಿಸಿಕೊಂಡಿದ್ದು ಇದಕ್ಕೆ ಕಾರಣ ಕರ್ತರಾದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕನ್ನಡದಲ್ಲೇ ವ್ಯವಹಾರ: ಬ್ಯಾಂಕ್‌ನ ಕನ್ನಡ ಅನುಷ್ಠಾನ ವಿಭಾಗದ ಮುಖ್ಯಸ್ಥ ಕಾವೇರಪ್ಪ ಮಾತನಾಡಿ, ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಬ್ಯಾಂಕ್ ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಲು ಸಾಧ್ಯ ಎಂಬ ಅಂಶವನ್ನು ಮನಗಂಡಿರುವ ನಮ್ಮ ಬ್ಯಾಂಕ್ ತ್ರಿಭಾಷಾ ಸೂತ್ರವನ್ನು ಜಾರಿಗೆ ತಂದಿದೆ ಎಂದರು.
ಕನ್ನಡಕ್ಕೆ ನಮ್ಮಬ್ಯಾಂಕ್‌ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿದೆ, ನಮ್ಮ ಬ್ಯಾಂಕ್‌ನ ಎಲ್ಲಾ ಫಾರಂಗಳು, ಮಾಹಿತಿಗಳು ಕನ್ನಡದಲ್ಲಿಸಿಗಲಿದೆ. ಹೊರರಾಜ್ಯದಿಂದ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕನ್ನಡಕಲಿಸುವ ಕೆಲಸವನ್ನು ಮಾಡುತ್ತಿದ್ದು ಗ್ರಾಹಕರ ಜತೆ ಸಾಧ್ಯವಾದಷ್ಟು ಕನ್ನಡಲ್ಲೇ ವ್ಯವಹರಿಸಲು ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ, ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸಿ.ರಾಮಲಿಂಗೇಶ್ವರ, ಸಾಹಿತಿ ಎಲೇಕೇರಿ ಶಿವರಾಂರನ್ನು ಸನ್ಮಾನಿಸಲಾಯಿತು.
 ಪ್ರಾದೇಶಿಕ ಎಜಿಎಂ ಎಂ.ರಮೇಶನ್, ಸಿಬ್ಬಂದಿ ಸಂಘದ ಉಪಾಧ್ಯಕ್ಷ ಹರಕೃಷ್ಣ, ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಬ್ಯಾಂಕ್‌ನ ಶಾಖಾವ್ಯವಸ್ಥಾಪಕ ವಿ.ಸುನೀಲ್, ಉಪ ವ್ಯವಸ್ಥಾಪಕ ಶ್ರೀಕಾಂತ್ ಭಟ್ ಜಾನಪದ ಕಲಾವಿದೆ ತಂಬೂರಿ ರಾಜಮ್ಮ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement