ದಲಿತ ಪರ ಸಂಘಟನೆ ಒಗ್ಗೂಡಲಿ
ಕನಕಪುರ: ದಲಿತ, ಹಿಂದುಳಿದ, ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹಕ್ಕುಗಳಿಗಾಗಿ ಹೊರಾಟ ನಡೆಸಲು ದಲಿತಪರ ಸಂಘಟನೆಗಳು ಒಗ್ಗೂಡಬೇಕು. ಆಗಮಾತ್ರ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ರ ಆಶಯಗಳು ಪೂರ್ಣವಾಗುತ್ತವೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್.ರಾಜು ಹೇಳಿದ್ದಾರೆ. ಅವರು ಕನಕಪುರದ ತಾಲೂಕು ಕಚೇರಿ ಆವರಣದಲ್ಲಿ ಡಾ.ಅಂಬೇಡ್ಕರ್ ಪರಿನಿರ್ವಾಣ ಮಹೋತ್ಸವ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಉದ್ಘಾಟಸಿ ಮಾತನಾಡಿದರು.
ದಲಿತ ಒಕ್ಕೂಟದ ನೂತನ ಅಧ್ಯಕ್ಷ ರಾಂಪುರ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿಲ್ಲೆಯಲ್ಲಿ ದಲಿತರ ಏಳಿಗೆಗಾಗಿ ಶ್ರಮಿಸುತ್ತಿರುವ ದಲಿತ ಸಂಘಟನೆಗಳ ಮುಖಂಡರನ್ನು ಗೌರವಿಸಲಾಯಿತು.
ದಲಿತ ಸಂಘಟನೆಗಳ ಒಕ್ಕೂಟ ಕನಕಪುರ ತಾಲೂಕಿನಲ್ಲಿ ದಲಿತ ಸಂಘಟನೆಗಳನ್ನು ಒಗ್ಗೂಡಿಸುವುದರೊಂದಿಗೆ ಶೋಷಿತ ಸಮುದಾಯದ ದನಿಯಾಗಿ ಕಾರ್ಯನಿರ್ವಹಿಸಲಿದೆ. ದಲಿತರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅನ್ಯಾಯಗಳು ನಡೆದಾಗ ಒಗ್ಗೂಡಿ ಹೋರಾಟ ನಡೆಸುತ್ತದೆ ಎಂದು ಅಧ್ಯಕ್ಷ ರಾಂಪುರ ನಾಗೇಶ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ರೇಲ್ವೆಮಂಡಳಿ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಪ್ರಜಾ ವಿಮೋಚನಾ ಚಳವಳಿ ರಾಜ್ಯಾಧ್ಯಕ್ಷ ಸೋಮಸುಂದರಮೂರ್ತಿ, ದಲಿತ ಹಿಂದುಳಿದವರ ವೇದಿಕೆ ರಾಜ್ಯಾಧ್ಯಕ್ಷ ಪಿ.ಮೂರ್ತಿ, ಲಂಬಾಣಿ ಬಂಜಾರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹದೇವನಾಯ್ಕ, ಡಿಪಿಐ ರಾಜ್ಯಾಧ್ಯಕ್ಷ ಮುನಿಸ್ವಾಮಿ, ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ಜಿ.ಗೋವಿಂದಯ್ಯ, ದಲಿತಸೇನೆ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್, ಕೋಟೆಕುಮಾರ್, ಸರ್ವಜನ ಸಮಾಜ ವೇದಿಕೆ ಅಧ್ಯಕ್ಷ ಸಿದ್ಧಬೀರಯ್ಯ,ಚೈತನ್ಯ ಸಂಘದ ಹೊಳಸಾಲಯ್ಯ, ಗುರುಮೂರ್ತಿ, ದಲಿತ ಕ್ರಾಂತಿಸೇನೆಯ ಜವರಯ್ಯ, ಪ್ರಜಾಪ್ರಭುತ್ವ ಯುವಸೇನೆಯ ರಾಂಪ್ರಸಾದ್, ಮಾದಿಗ ದಂಡೋರ ಸಂಘದ ಬಾಬು, ಮರಿಯಪ್ಪ, ಟಿ.ಗೋಪಿ ಪಾಲ್ಗೊಂಡಿದ್ದರು.