ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿರುದ್ಯೋಗಿ ಮಹಿಳೆಯರಿಗೆ ತರಬೇತಿ ಶಿಬಿರ

Vishwanath S
Updated On : 17 Dec 2013, 12:46 pm

ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಬೆಂಗಳೂರು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರುದ್ಯೋಗ ಯುವಕ ಯುವತಿಯರಿಗಾಗಿ ಉಚಿತ ಅಲ್ಪಾವಧಿ ತರಬೇತಿ ಶಿಬಿರ ಸೋಮವಾರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಪುರಸಭಾ ಸದಸ್ಯ ಎಂ.ನಾರಾಯಣಸ್ವಾಮಿ ನೆರವೇರಿಸಿ ಲಯನ್  ಸಂಸ್ಥೆಯವರು ಗ್ರಾಮೀಣ ಜನರಿಗಾಗಿ ನಿರಂತರವಾಗಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೊತೆಯಲ್ಲಿ ನಿರುದ್ಯೋಗಿ ಮಹಿಳೆಯರು ಸ್ವತಂತ್ರವಾಗಿ ಉದ್ಯೋಗ ಆರಂಭಿಸಲು ಅಗತ್ಯವಾದ ತರಬೇತಿ ನೀಡುತ್ತಿರುವುದು ಅಭಿನಂದನೀಯ ಎಂದರಲ್ಲದೆ ಯಾವುದೇ ಸಂದರ್ಭದಲ್ಲೂ ಪುರಸಭಾ ಸದಸ್ಯರ ಸಹಕಾರವಿರುತ್ತದೆ ಎಂದರು.  
ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ತರಬೇತಿ ಮೇಲ್ವಿಚಾರಕರಾದ ಎಂ.ಗಿರೀಶ್ ಮಾತನಾಡಿ ಈ ಶಿಬಿರದಲ್ಲಿ ತಿಳಿಸುವ ಎಲ್ಲ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ತರಬೇತಿ ಸಮಯದಲ್ಲಿ ಎಂತಹ ಅನುಮಾನ ಬಂದರೂ ಕೂಡಲೇ ಬಗೆಹರಿಸಿಕೊಳ್ಳಿ ಅಲ್ಲದೆ ಸಣ್ಣ ಬಂಡವಾಳದೊಂದಿಗೆ ಉದ್ಯಮ ಆರಂಭಿಸಿ ಎಂದರು.
   ಈ ಶಿಬಿರದಲ್ಲಿ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡುವುದಾಗಿ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿದರು.  ಮಾಜಿ ಅಧ್ಯಕ್ಷ ಎಸ್. ಸತೀಶ್ ಕುಮಾರ್, ಲಯನೆಸ್ ಅಧ್ಯಕ್ಷ ಪದ್ಮಾವತಮ್ಮ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪಿ. ವಿಜಯಕುಮಾರ್ ವಂದನೆ ಅರ್ಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement