ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಗರ್‌ಹುಕುಂ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

Vishwanath S
Updated On : 17 Dec 2013, 12:45 pm

ದೇವನಹಳ್ಳಿ: ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಬಗರ್ ಹುಕುಂ ಸಾಗುವಳಿದಾರರ ಜಮೀನುಗಳನ್ನು ವಶಪಡಿಸಿಕೊಂಡ ಸರ್ಕಾರ ಇದೂವರೆವಿಗೂ ಯಾವುದೇ ಪರಿಹಾರ ನೀಡದೇ ಇರುವುನ್ನು ವಿರೋಧಿಸಿ ದೇವನಹಳ್ಳಿ ತಾಲೂಕು ಪ್ರಾಂತ ರೈತ ಸಂಘದ ಕಾರ್ಯಕರ್ತರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮಿನಿ ವಿಧಾನಸೌಧದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕುಳಿತು ಬಹಿರಂಗ ಸಾರ್ವಜನಿಕ ಸಭೆ ನಡೆಸಿದರು.ದೇವನಹಳ್ಳಿ ತಾಲೂಕು ಪ್ರಾಂತ ರೈತ ಸಂಘದ ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ ದೇವನಹಳ್ಳಿ ನಿರ್ಮಾಣಗೊಂಡಿರುವ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ರೈತರಿಂದ ವಶಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಿದ್ದು ಕೆಲವು ರೈತರಿಗೆ ಒಂದು ಎಕರೆಗೆ ಕೇವಲ ಐದು ಲಕ್ಷರು. ಮಾತ್ರ ಪರಿಹಾರ ದೊರೆತಿದೆ. ಅಲ್ಲದೆ ಬಲಾಢ್ಯರಿಗೆ ಹೆಚ್ಚಿನ ಮೊತ್ತ ದೊರಕಿದೆ ಎಂದು ಆರೋಪಿಸಿದರಲ್ಲದೆ ಎಲ್ಲ ರೈತರಿಗೂ ಏಕ ರೂಪದ ಪರಿಹಾರ ದೊರಕಲೇ ಬೇಕು ಮತ್ತು ಇದೇ ವಿಮಾನ ನಿಲ್ದಾಣಕ್ಕಾಗಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು ಸುಮಾರು 800 ಮಂದಿ ರೈತರಿಗೆ ಯಾವುದೇ ಪರಿಹಾರ ನೀಡದೆ ರೈತರನ್ನು ಬೀದಿಪಾಲು ಮಾಡಲಾಗಿದೆ. ಆದ್ದರಿಂದ ಎಲ್ಲ  ಸಾಗುವಳಿದಾರರಿಗೂ ಶಿವಮೊಗ್ಗದಲ್ಲಿ ರೈತರಿಗೆ ಪರಿಹಾರ ನೀಡಿದಂತೆ ಇಲ್ಲಿನ ರೈತರಿಗೂ ಪರಿಹಾರ ದೊರಕಬೇಕು ಎಂದು ಒತ್ತಾಯಿಸಿದರು.
ದೇವನಹಳ್ಳಿ ತಾಲೂಕು ಕಸಬಾ ಹೋಬಳಿ ಬೊಮ್ಮವಾರ ಗ್ರಾಮದ ಸರ್ವೆ ನಂ. 36 ರಲ್ಲಿ 87 ಎಕರೆ ಸರ್ಕಾರಿ ಜಮೀನಿದ್ದು ಇದರಲ್ಲಿ ಎಲ್ಲ ಜಾತಿಯ ಬಡವರಿಗೆ ನಿವೇಶನ ದೊರಕಬೇಕು ಎಂದು ಸಂಘದ ಅಧ್ಯಕ್ಷ ಎನ್.ವೀರಣ್ಣ ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಹೋರಾಟ ಸಮಿತಿಯ ಗೋವಿಂದಪ್ಪ, ಮಹಿಳಾ ಘಟಕದ ಕಾರ್ಯದರ್ಶಿ  ಸುಮಿತ್ರಮ್ಮ, ಕೃಷ್ಣವೇಣಿ, ಸಿ.ಎಂ.ರಮೇಶ್, ಜಯರಾಮಪ್ಪ ಉಪಸ್ಥಿತರಿದ್ದರು. ಬೇಡಿಕೆಗಳನ್ನು ಈಡೇರಿಸಬೇಕೆಂದು ರೈತ ಸಂಘದ ಗೌರವಾಧ್ಯಕ್ಷ ವಿ.ನಾರಾಯಣಸ್ವಾಮಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement