ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅವಧಿ ಮೀರಿದ ರು. 40 ಲಕ್ಷ ಬೆಲೆ ಮದ್ಯ ನಾಶ

Vishwanath S
Updated On : 19 Dec 2013, 1:07 am

ದೇವನಹಳ್ಳಿ: ಇಲ್ಲಿನ ವಿಜಯಪುರ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಗೋದಾಮಿನಲ್ಲಿ ಮಾರಾಟವಾಗದೆ ಮತ್ತು ಅವಧಿ ಮೀರಿರುವ ಸುಮಾರು 40 ಲಕ್ಷ ರು. ಬೆಲೆ ಬಾಳುವ ನಾಕವೈನ್, ಬಕಾರ್ಡಿ ಮಧ್ಯ ಹಾಗೂ ಬಿಯರ್ ಬಾಟಲ್‌ಗಳನ್ನು ಬುಧವಾರ ಅಬಕಾರಿ ಇಲಾಖೆ ಅಧಿಕಾರಿಗಳು ನಾಶಪಡಿಸಿ ಹೊಂಡದಲ್ಲಿ ಸುರಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಹೊಸಕೋಟೆ ಅಬಕಾರಿ ಉಪ ಅಧೀಕ್ಷಕ  ಎಂ.ನಟರಾಜ್ ಹಾಗೂ ದೇವನಹಳ್ಳಿ ಅಬಕಾರಿ ನಿರೀಕ್ಷಕ ತ್ರಿನೇತ್ರ ಇವರುಗಳು ಇಲ್ಲಿನ ರಾಜ್ಯ ಮದ್ಯ ಪಾನೀಯ ನಿಗಮದ ಗೋದಾಮಿನಲ್ಲಿದ್ದ ಮಾನವ ಸೇವನೆಗೆ ಯೋಗ್ಯವಾಗಿಲ್ಲದೇ ಇರುವ 49 ಬಾಕ್ಸ್ ಮತ್ತು 45 ಬ್ಲ್ ಬಕಾರ್ಡಿ ಮದ್ಯ, 582 ಬಾಕ್ಸ್ ಮತ್ತು 81 ಬಾಟಲ್ ನಾಕಾ ವೈನ್ ಹಾಗೂ 247 ಬಾಕ್ಸ್ ಮತ್ತು 93 ಬಾಟಲ್ ಬಿಯರ್‌ಗಳನ್ನು ನಾಶಪಡಿಸಿದರು. ನಾಶಪಡಿಸಿರುವ ಎಲ್ಲ ಮದ್ಯದ ಬಾಟಲ್‌ಗಳಿಗೆ ವೈನರಿ ಮತ್ತು ಬ್ರೀವರಿಯಿಂದ ಸರ್ಕಾರಕ್ಕೆ ಎಲ್ಲ ತೆರಿಗೆಯನ್ನು ಪಾವತಿಸಲಾಗಿದೆ ಎಂದು ಉಪ ಅಧೀಕ್ಷಕ ಎಂ. ನಟರಾಜ್ ಪತ್ರಕರ್ತರಿಗೆ ತಿಳಿಸಿದರಲ್ಲದೆ ಮದ್ಯದ ದಾಸ್ತಾನಿನ ಮಾದರಿಗಳನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement