ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪ್ರಯೋಗ ಶಾಲಾ ತಂತ್ರಜ್ಞರು ಆರೋಗ್ಯ ಇಲಾಖೆಯ ಕಣ್ಣುಗಳಿದ್ದಂತೆ: ರಘುನಾಥ್

Vishwanath S
Updated On : 19 Dec 2013, 1:06 am

ರಾಮನಗರ: ಪ್ರಯೋಗ ಶಾಲಾ ತಂತ್ರಜ್ಞರು ಆರೋಗ್ಯ ಇಲಾಖೆಯ ಕಣ್ಣುಗಳಿದ್ದಂತೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನದ ಅರಿವು ಪಡೆದು, ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಡಾ.ರಘುನಾಥ್ ತಿಳಿಸಿದರು.
ನಗರದ ಸ್ಫೂರ್ತಿ ಭವನದಲ್ಲಿ ನಡೆದ ಜಿಲ್ಲಾ ಸರ್ಕಾರಿ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರ ಸಂಘದ 2014-19ನೇ ಸಾಲಿನ ಪುನರ್ ರಚನೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ವೃತ್ತಿಗೆ ಸೀಮಿತರಾಗದೆ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು.  ಪ್ರಯೋಗಶಾಲಾ ತಂತ್ರಜ್ಞರು ಸಂಘಟಿತರಾಗುವ ಮೂಲಕ ತಾವು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರು ತನ್ನಿ ಎಂದು ಕಿವಿಮಾತು ಹೇಳಿದರು.
 ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಪಿ. ಜಯರಾಂ, ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ವೆಂಕಟಾಚಲಮೂರ್ತಿ, ಡಿಎಂಒ ಶ್ರೀನಿವಾಸ್ ಮಾತನಾಡಿದರು. ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ನೂತನ ನಿರ್ದೇಶಕ ಶಿವಕುಮಾರ್, ಜಯರಾಮ್, ನಾಗರಾಜು, ಅಶ್ವಿನಿ, ಪುಟ್ಟಸ್ವಾಮಿಗೌಡ, ನಾರಾಯಣಗೌಡ ಭಾಗವಹಿಸಿದ್ದರು. ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.
ನೂತನ ಕಾರ್ಯಕಾರಿ ಸಮಿತಿ: 2014-15ನೇ ಸಾಲಿಗೆ ಜಿಲ್ಲಾ ಸಂಘದ ಎಚ್.ಸಿ.ಹನುಮಚಂದ್ರು ಅಧ್ಯಕ್ಷ, ಡಿ.ಪುಟ್ಟಸ್ವಾಮಿಗೌಡ ಗೌರವಾಧ್ಯಕ್ಷ, ಎಸ್. ಶಶಿಕಲ, ಎಂ.ಜಯಣ್ಣ ಉಪಾಧ್ಯಕ್ಷರು, ಆರ್.ಸಿ. ನಾರಾಯಣಗೌಡ ಪ್ರಧಾನ ಕಾರ್ಯದರ್ಶಿ, ಎನ್.ಚಂದ್ರಯ್ಯ ಖಜಾಂಚಿ, ದೊಡ್ಡಸ್ವಾಮಿ ಜಂಟಿ ಕಾರ್ಯದರ್ಶಿ, ಎಂ.ವಿ.ಯೋಗೇಶ್ ಲೆಕ್ಕಪರಿಶೋಧಕ, ಎಸ್.ಕೆ.ರಮೇಶ್, ಬಿ.ಎನ್.ಲೋಕೇಶ್, ರಾಮಪ್ರಸಾದ್, ಸುಜಾತ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement