ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಯುವಜನತೆ ರಂಗ ನಾಟಕ, ಜಾನಪದ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಿ

Vishwanath S
Updated On : 19 Dec 2013, 1:07 am

ನೆಲಮಂಗಲ: ಆಧುನಿಕತೆಗೆ ಮಾರು ಹೋಗಿರುವ ಯುವಜನತೆ ಜೀವಂತ ಕಲೆಗಳಾದ ರಂಗ ನಾಟಕಗಳು, ಜಾನಪದ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಿ ಗೌರವಿಸುವ ಪರಿಪಾಠ ರೂಢಿಸಿಕೊಂಡರೆ ಕಲಾವಿದರಲ್ಲಿ ಆಸಕ್ತಿ ಹೆಚ್ಚಾಗಿ ಕಲೆ ಬೆಳೆಯಲು ಸಾಧ್ಯವಾಗುತ್ತದೆ ಎಂದು  ಹಿರಿಯ ಕಲಾವಿದ ಬಿ.ವಿ. ನಾಗರಾಜು ಹೇಳಿದರು.
 ಅವರು ಪಟ್ಟಣದ  ವಿಜಯನಗರ ಬಡಾವಣೆಯಲ್ಲಿರುವ ಶ್ರೀ ಗಣಪತಿ ರಂಗಮಂದಿರದಲ್ಲಿ ಪ್ರತಿಭಾರಂಗ ಹಾಗೂ ಶ್ರೀ ವಾಣಿ ಕಲಾಸಂಘ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ  ಸಾಮಾಜಿಕ ನಾಟಕ ಗಲಾಟೆ ಸಂಸಾರ, ಹಾಸ್ಯ ನಾಟಕ ಆಸ್ಪತ್ರೆಯ ಅವಾಂತರ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಬೆಳ್ಳಿತೆರೆ ಹಾಗೂ ಕಿರುತೆರೆಯ ಅಬ್ಬರದಿಂದಾಗಿ ಅಳಿವಿನಂಚಿನಲ್ಲಿರುವ ರಂಗಕಲೆಯನ್ನು ಹಾಗೂ ಕಲಾವಿದರನ್ನು  ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಎಂದರು. ಉತ್ತಮ ಕಥೆಗಳಿಗೆ ಮನಸೋತು ನಾಟಕ ಅಭಿನಯಿಸುವ ಮೂಲಕ ಮುಂದಿನ ಪೀಳಿಗೆಯೂ  ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರವು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಕಿರುತೆರೆಯ ಸಹನಟ ಬಿ.ರಾಮಯ್ಯ ತಿಳಿಸಿದರು. ಪ್ರತಿಭಾ ರಂಗದಲ್ಲಿಯೇ ತರಬೇತಿ ಪಡೆದ ಕಲಾವಿದ ಹಲವಾರು ವರ್ಷಗಳಿಂದ ನಾಟಕಗಳಲ್ಲಿ ತೊಡಗಿಸಿಕೊಂಡು ನಾಟಕ ರಂಗ ಹಾಗೂ ಧಾರವಾಹಿ ರಂಗಗಳಲ್ಲಿ ಹೆಸರು ಮಾಡಿದ ಕಲಾವಿದ ಜಕ್ಕಸಂದ್ರ ಮಂಜುನಾಥ್ ಅವರನ್ನು ಪ್ರತಿಭಾ ರಂಗದ ಕಲಾವಿದರು  ಗೌರವಿಸಿದರು. ಪ್ರತಿಭಾ ರಂಗದ ವತಿಯಿಂದ ನಾಟಕಗಳಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement